Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕಡಬ: ಗ್ಯಾಸ್‌ ಪಂಪ್‌ನಲ್ಲಿ ಅಧಿಕ ದರ ವಸೂಲಿ; ಪ್ರಶ್ನಿಸಿದ ಚಾಲಕನಿಗೆ “ಹೋಗಿ ಹಗ್ಗ ತಗೊಳ್ಳಿ” ಎಂದ ಸಿಬ್ಬಂದಿ- ಮುತ್ತಿಗೆ ಹಾಕಿದ ಆಟೋ ಚಾಲಕರು..!!
    ಇತ್ತೀಚಿನ ಸುದ್ದಿ

    ಕಡಬ: ಗ್ಯಾಸ್‌ ಪಂಪ್‌ನಲ್ಲಿ ಅಧಿಕ ದರ ವಸೂಲಿ; ಪ್ರಶ್ನಿಸಿದ ಚಾಲಕನಿಗೆ “ಹೋಗಿ ಹಗ್ಗ ತಗೊಳ್ಳಿ” ಎಂದ ಸಿಬ್ಬಂದಿ- ಮುತ್ತಿಗೆ ಹಾಕಿದ ಆಟೋ ಚಾಲಕರು..!!

    April 20, 2023
    Share

    ಕಡಬ: ಗ್ಯಾಸ್‌ ದರವು ಕಡಿಮೆಯಾಗಿದ್ದರು ಹಿಂದಿನ ದರವನ್ನೇ ಪಡೆದ ಸಿಬ್ಬಂದಿಯನ್ನು ಆಟೋ ಚಾಲಕ ಪ್ರಶ್ನಿಸಿದಾಗ ಉಡಾಫೆ ಉತ್ತರ ನೀಡಿದ್ದು, ಇದರಿಂದ ಆಕ್ರೋಶಗೊಂಡ ಆಟೋ ಚಾಲಕರು ಪಂಪ್‌ಗೆ ಮುತ್ತಿಗೆ ಹಾಕಿದ ಕಡಬದಲ್ಲಿ ನಡೆದಿದೆ ಆಟೋ ಎಲ್‌ಪಿಜಿ ದರದಲ್ಲಿ ಕಡಿತವಾಗಿದ್ದರೂ ಮುಂಜಾನೆ 6ರಿಂದ 9ರವರೆಗೆ ಎಲ್‌ಪಿಜಿ ಪಂಪಿನಲ್ಲಿ ಹಳೆ ದರದಲ್ಲಿಯೇ ಗ್ಯಾಸ್ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಆಟೋ ಚಾಲಕನಿಗೆ ಗ್ಯಾಸ್‌ ಸಿಬ್ಬಂದಿ “ಹೋಗಿ ಹಗ್ಗ ತಗೊಳ್ಳಿ” ಎಂದು ಉಡಾಫೆ ಉತ್ತರ ನೀಡಿದ್ದಾರೆನ್ನಲಾಗಿದೆ.

    ಈ ವಿಷಯ ತಿಳಿದು ಆಟೋ ಚಾಲಕರು ಪಂಪ್‌ಗೆ ದೌಡಾಯಿಸಿ ಆಟೋ ಚಾಲಕರಿಂದ ಪಡೆದ ಅಧಿಕ ದರವನ್ನು ವಾಪಾಸು ನೀಡುವುದಲ್ಲದೆ ಸಿಬ್ಬಂದಿ ಕ್ಷಮೆ ಹೇಳಬೇಕೆಂದು ಹಠ ಹಿಡಿದಿದ್ದಾರೆ. ಕೂಡಲೇ ಸೇಲ್ಸ್ ಮ್ಯಾನೇಜರ್ ಮಧ್ಯಪ್ರವೇಶಸಿ ಸಿಬ್ಬಂದಿಗಳಿಂದ ಆಗಿರುವ ಪ್ರಮಾದವನ್ನು ಒಪ್ಪಿಕೊಂಡು, ಬೆಳಿಗ್ಗೆ 6 ಗಂಟೆಯಿಂದ 9 ಗಂಟೆ ತನಕ ಗ್ಯಾಸ್ ಹಾಕಿರುವ ಆಟೋಗಳಿಂದ ಹೆಚ್ಚುವರಿಯಾಗಿ ಪಡೆದುಕೊಂಡಿರುವ ಹಣವನ್ನು ತಮ್ಮ ವೈಯುಕ್ತಿಕ ಖಾತೆಯಿಂದ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

    Post Views: 201

    Related Posts

    ಮಂಗಳೂರು: ನಿವೃತ್ತ ಬ್ಯಾಂಕ್ ಮಹಿಳಾ ಉದ್ಯೋಗಿಗೆ ಸೈಬರ್ ವಂಚನೆ

    March 6, 2026

    ಬಜೆಟ್ 2026: ದ.ಕ ಜಿಲ್ಲೆಗೆ 2 ಹೊಸ ಪೊಲೀಸ್ ಠಾಣೆ ಸೇರಿ ಕರ್ನಾಟಕದಲ್ಲಿ 12 ಹೊಸ ಪೊಲೀಸ್ ಠಾಣೆ

    March 6, 2026

    ಮಂಗಳೂರು: ಕಾಲೇಜು ಯುವಕ-ಯುವತಿಯರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ- 6 ಮಂದಿ‌ ಅರೆಸ್ಟ್

    March 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.