ಅಂಕೋಲಾ: ಇಲ್ಲಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತಗೊಂಡು ಈವರೆಗೆ 11 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಈಗಾಗಲೇ ಕೆಲವರ ಮೃತದೇಹವನ್ನು ಗುಡ್ಡ ತೆರವು ಕಾರ್ಯಾಚರಣೆಯ ವೇಳೆಯಲ್ಲಿ ಪತ್ತೆಯಾಗಿದೆ. ಇದರ ನಡುವೆ ತಮಿಳುನಾಡು ಮೂಲಕ ಲಾರಿ ಚಾಲಕನೊಬ್ಬನು ನಾಪತ್ತೆಯಾಗಿದ್ದಾರೆ ಅಂತ ಕುಟುಂಬಸ್ಥರು ದೂರು ನೀಡಿದ್ದಾರೆ.
ಹೀಗಾಗಿ ಶಿರೂರು ಬಳಿಯ ಗುಡ್ಡಕುಸಿತ ಘಟನೆಯಲ್ಲಿ ನಾಪತ್ತೆಯಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಂಕೋಲ ಬಳಿಯ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿತ್ತು. ಈ ಸಂದರ್ಭದಲ್ಲಿ ಎರಡು ಕುಟುಂಬದ ಜನರು, ಅದೇ ಸಂದರ್ಭದಲ್ಲಿ ಟೀ ಅಂಗಡಿಯ ಮುಂದೆ ನಿಂತಿದ್ದಂತ ಲಾರಿ ಚಾಲಕ ಸೇರಿದಂತೆ 11 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿತ್ತು.
ಈಗಾಗಲೇ ಕೆಲವರ ಮೃತದೇಹಗಳು ಗುಡ್ಡ ಕುಸಿತದ ಮಣ್ಣು ತೆರವು ಕಾರ್ಯಾಚರಣೆಯ ವೇಳೆಯಲ್ಲಿ ಪತ್ತೆಯಾಗಿವೆ. ಇದರ ನಡುವೆ ತಮಿಳುನಾಡು ಮೂಲಕ ಲಾರಿ ಚಾಲಕ ಶರವಣ ಎಂಬುವರು ನಾಪತ್ತೆಯಾಗಿದ್ದಾರೆ ಅಂತ ಕುಟುಂಬಸ್ಥರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶರವಣ ಅವರು ಮೊಬೈಲ್ ಚಾರ್ಜಿಂಗ್ ಕಡಿಮೆಯಾಗಿ ನಾಪತ್ತೆಯಾಗಿದ್ದಾರೆ. ಅವರು ಕೂಡ ಶಿರೂರು ಬಳಿಯ ಕುಡ್ಡ ಕುಸಿತದ ಮಣ್ಣಿನಡಿ ಸಿಲುಕಿರುವಂತ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಹೀಗಾಗಿ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರ ಸಂಖ್ಯೆ 12ಕ್ಕೆ ಏರಿಕೆಯಾದಂತೆ ಆಗಿದೆ.