ಕರಾವಳಿ ಭಾಗ ಸೇರಿದಂತೆ ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಹೋರಾಟ ನಡೆಸುತ್ತಿದ್ದ ಬೆನ್ನಲ್ಲೇ ದಿನಕೊಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಇಂತಹದ್ದೇ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ದಾಸಕೋಡಿ ಬಳಿ ಹಿಂದೂ ಯುವತಿ- ಮುಸ್ಲಿಂ ಯುವಕನೊಂದಿಗೆ ಬೆಂಗಳೂರು ಬಸ್ಸಿನಲ್ಲಿ ಪ್ರಯಾಣಿಸುವುದು ಸಿಕ್ಕಿಬಿದಿದ್ದು, ಬಸ್ಸನ್ನುಅಡ್ಡಗಟ್ಟಿ ಭಜರಂಗದಳ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಮುಸ್ಲಿಂ ಯುವಕ ಮಹಮ್ಮದ್ ರಾಯಿಫ್ನೊಂದಿಗೆ ಹಿಂದೂ ಯುವತಿ ನಿಧಿ ಶೆಟ್ಟಿ ಪ್ರಯಾಣಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಕೂಡಲೇ ಭಜರಂಗದಳ ಕಾರ್ಯಕರ್ತರು ಬಸ್ಸು ತಡೆಯೋದಕ್ಕೆ ಮುಂದಾಗಿದ್ದು, ಈ ಸಂರ್ಭದಲ್ಲಿ ಭಜರಂಗ ದಳದ ಕಾರ್ಯಕರ್ತರಿಗೆ ಹಿಂದೂ ಯುವತಿ ಬಸ್ಸಿನಲ್ಲೆ ನಿಂತುಕೊಂಡು ರಂಪಾಟ ಮಾಡಿದ್ದಾಳೆ. ಹಿಂದೂ ಯುವತಿಗೆ ಭಜರಂಗದಳ ಕಾರ್ಯಕರ್ತರು ಕ್ಲಾಸ್ಟ್ ತೆಗೆದುಕೊಂಡು , ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ