Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ» ಸಚಿವರ ವಿರುದ್ಧ ‘ಹನಿಟ್ರ್ಯಾಪ್’ ಆರೋಪ : ಉನ್ನತಮಟ್ಟದ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ
    ಇತ್ತೀಚಿನ ಸುದ್ದಿ

     ಸಚಿವರ ವಿರುದ್ಧ ‘ಹನಿಟ್ರ್ಯಾಪ್’ ಆರೋಪ : ಉನ್ನತಮಟ್ಟದ ತನಿಖೆಗೆ ಆದೇಶಿಸಿದ ರಾಜ್ಯ ಸರ್ಕಾರ

    March 20, 2025
    Share

    ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಹನಿ ಟ್ರ್ಯಾಪ್ ಕುರಿತು ಗಂಭೀರವಾದ ಚರ್ಚೆ ನಡೆಯಿತು.ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದರು.ಬಳಿಕ ಕೆ ಎನ್ ರಾಜಣ್ಣ ಅವರು ಉತ್ತರಿಸಿ, ಯತ್ನಾಳ್ ಅವರಿಗೆ ಕ್ಲಾರಿಫಿಕೇಶನ್ ಕೊಡಲು ಬಯಸುತ್ತೇನೆ ಎಂದು ಈ ಕುರಿತು ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದರು. ಬಳಿಕ ಗೃಹ ಸಚಿವರು ಸಚಿವ ಕೆ ಎನ್ ರಾಜಣ್ಣ ದೂರು ನೀಡಿದರೆ ಉನ್ನತಮಟ್ಟದ ತನಿಖೆಗೆ ಆದೇಶಿಸುತ್ತೇನೆ ಎಂದು ಪರಮೇಶ್ವರ್ ತಿಳಿಸಿದರು.

    ವಿಧಾನಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ ಸಚಿವ ಕೆ ಎನ್ ರಾಜಣ್ಣ ದೂರು ಕೊಡಲಿ ಉನ್ನತಮಟ್ಟದ ತನಿಖೆ ಮಾಡುತ್ತೇವೆ. ಒಬ್ಬರಿಗಾಯಿತು ಇಬ್ಬರಿಗೆ ಆಯ್ತು ಅನ್ನೋದಕ್ಕಿಂತ ಹೆಚ್ಚಾಗಿ ಇದಕ್ಕೆ ಒಂದು ಫುಲ್ ಸ್ಟಾಪ್ ಹಾಕಬೇಕಾಗಿದೆ. ಕರ್ನಾಟಕ ವಿಧಾನ ಮಂಡಲ ಏನಿದೆ ಇಡಿ ದೇಶದಲ್ಲಿ ಬಹಳ ಗೌರವ ಸಂಪಾದನೆ ಮಾಡಿದೆ.

    ಈ ಸದನದ ಸದಸ್ಯರು ನಮ್ಮ ತಂದೆಯವರು.ಅವರು ಕೂಡ 1952 ರಲ್ಲಿ ಮೇಲ್ಮನೆ ಸದಸ್ಯರಾಗಿದ್ದರು. ಬಹಳ ದೊಡ್ಡ ವ್ಯಕ್ತಿಗಳು ಈ ಸದನದಲ್ಲಿ ಸದಸ್ಯರಾಗಿ ಅವರ ಕುರುಹುಗಳನ್ನು, ಆದರ್ಶಗಳನ್ನು ಈ ರಾಜ್ಯದಲ್ಲಿ ಬಿಟ್ಟು ಹೋಗಿದ್ದಾರೆ. ಅಂತಹ ಸಂದರ್ಭದಲ್ಲಿ ಸದನದ ಗೌರವ ಕಾಪಾಡಬೇಕಾದರೆ ಸದನದ ಮರ್ಯಾದೆ ಕಾಪಾಡಬೇಕಾದರೆ ಸದಸ್ಯರ ಮರ್ಯಾದೆ ಕಾಪಾಡಬೇಕಾದರೆ ಇದಕ್ಕೆಲ್ಲ ಇತಿಶ್ರೀ ಹಾಡಬೇಕಾಗುತ್ತದೆ.

    ಇಲ್ಲದೆ ಹೋದರೆ ಹೀಗೆ ನಡೆಸಿಕೊಂಡು ಹೋದರೆ ಬಹಳಷ್ಟು ಜನರಿಗೆ ಅವರವರ ಕುರಿತು ಮರ್ಯಾದೆ ಪ್ರಶ್ನೆ ಕಾಡುತ್ತದೆ. ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎನ್ನಲಾಗಿದ್ದು, ಅವರು ನನಗೆ ಒಂದು ದೂರು ಕೊಡುತ್ತೇನೆ ಎಂದು ಹೇಳಿದ್ದಾರೆ ಆ ಒಂದು ದೂರಿನ ಮೇಲೆ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡುತ್ತೇನೆ ಸತ್ಯಾ ಸತ್ಯತೆ ಎಲ್ಲರಿಗೂ ಗೊತ್ತಾಗಲಿ ಹಾಗಾಗಿ ಉನ್ನತ ಮಟ್ಟದ ತನಿಖೆಗೆ ಆದೇಶಿದ್ದೇನೆ ಎಂದರು.

    Post Views: 164

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.