ಉಳ್ಳಾಲ: ಕರ್ಕಷ ಹಾರ್ನ್ ಬಳಸುತ್ತಿದ್ದ ವಾಹನಗಳನ್ನು ತಡೆದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಮೂರು ದಿನಗಳಲ್ಲಿ ಒಟ್ಟು 130 ವಾಹನಗಳ ಹಾರ್ನ್ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಠಾಣಾಧಿಕಾರಿ ರಮೇಶ್ ಹಾನಾಪುರ ನೇತೃತ್ವದ ಪೊಲೀಸರ ತಂಡ ತಲಪಾಡಿಯಲ್ಲಿ ತಪಾಸಣೆ ನಡೆಸಿ ಕ್ರಮಕೈಗೊಂಡಿದ್ದಾರೆ. ಟ್ರಕ್ ಗಳಲ್ಲಿ ಕಾನೂನು ಉಲ್ಲಂಘಿಸಿ ಕರ್ಕಶವಾದ ಹಾರ್ನ್ ಬಳಕೆ ಮಾಡುತ್ತಿರುವ ಕುರಿತು ಸಾರ್ವಜನಿಕ ವಲಯದಿಂದ ದೂರುಗಳು ಬಂದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ಮಾ.31 ರಿಂದ ಎ.3 ರವರೆಗೆ ತಪಾಸಣೆ ನಡೆಸಿದ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.