ಮಂಗಳೂರು: ನಗರದಲ್ಲಿ ಸ್ವಚ್ಛತೆ ಮತ್ತು ಸೇವಿಸುವ ಆಹಾರದಲ್ಲಿ ನೈರ್ಮಲ್ಯತೆಯನ್ನು ಕಾಪಾಡುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೆಲವು ಹೊಟೇಲ್ ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

ಜ್ಯೋತಿ ವೃತ್ತದಿಂದ ಬೆಂದೂರ್ವೆಲ್ ವರೆಗೆ ಪ್ರಸಿದ್ಧ ಹೊಟೇಲ್ ನವರೇ ಕಸ ವಿಂಗಡಣೆಯ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ದಿಢೀರ್ ರೈಡ್ ಮಾಡಲಾಯಿತು.
ಮೊದಲ ಬಾರಿಗೆ ಐದು ಸಾವಿರ ರೂ ದಂಡ ವಿಧಿಸುವುದರೊಂದಿಗೆ ಇನ್ಮುಂದೆ ಇದೇ ನಿರ್ಲಕ್ಷ್ಯ ಮುಂದುವರೆದಲ್ಲಿ ಟ್ರೇಡ್ ಲೈಸೆನ್ಸ್ ರದ್ದು ಮಾಡಿ ಹೊಟೇಲ್ ಮುಚ್ಚಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಲಾಯಿತು.