Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ನೇಣು ಹಾಕಿಕೊಳ್ಳುತ್ತೇನೆ ಎಂದು ಪತ್ನಿಗೆ ಬೆದರಿಸಲು ಹೋಗಿ ನಿಜವಾಗಿಯೂ ಸಾವನಪ್ಪಿದ ಪತಿ
    ಇತ್ತೀಚಿನ ಸುದ್ದಿ

    ನೇಣು ಹಾಕಿಕೊಳ್ಳುತ್ತೇನೆ ಎಂದು ಪತ್ನಿಗೆ ಬೆದರಿಸಲು ಹೋಗಿ ನಿಜವಾಗಿಯೂ ಸಾವನಪ್ಪಿದ ಪತಿ

    May 16, 2024
    Share

    ಬೆಂಗಳೂರು : ಪತಿಯಿಂದ ಬೆಸರಿಸಿಕೊಂಡು ತವರು ಮನೆ ಸೇರಿದ್ದ ಪತ್ನಿಯನ್ನು ಮತ್ತೆ ಕರೆತರಲು ಪತಿಯೊಬ್ಬ ಆತ್ಮಹತ್ಯೆ ನಾಟಕವಾಡಲು ಹೋಗಿ ನೀಜವಾಗಿಯೂ ಸಾವನಪ್ಪಿದ ಘಟನೆ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಬಿಹಾರ ಮೂಲದ ಅಮಿತ್ ಕುಮಾರ್ (28) ಮೃತ ವ್ಯಕ್ತಿ.​

    10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅಮಿತ್ ಕುಮಾರ್, ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದ. ಕಳೆದ ಒಂದು ವರ್ಷದ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿ, ಪೋಷಕರ ವಿರೋಧದ ನಡುವೆಯೂ ವಿವಾಹವಾಗಿದ್ದ. ಆದರೆ, ಇತ್ತೀಚೆಗೆ ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ ಬಳಿಕ ತನಗೆ ಸಮಯ ನೀಡುತ್ತಿಲ್ಲ, ಸ್ನೇಹಿತರೊಂದಿಗೆ ಸದಾ ಫೋನ್ ಕರೆಯಲ್ಲಿರುತ್ತಾಳೆ ಎಂಬ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಪತ್ನಿ, ಅಮಿತ್ ಕುಮಾರ್​ನನ್ನು ತೊರೆದು ಬೇರೆಡೆ ವಾಸವಿದ್ದಳು ಎಂದು ತಿಳಿದುಬಂದಿದೆ.

    ಪತ್ನಿಗೆ ಕರೆ ಮಾಡುತ್ತಿದ್ದ ಅಮಿತ್ ಕುಮಾರ್ ಮನೆಗೆ ಬರುವಂತೆ ಪದೇ ಪದೇ ಮನವಿ ಮಾಡುತ್ತಿದ್ದ. ಬುಧವಾರವೂ ಕೂಡ ಪತ್ನಿಗೆ ವಿಡಿಯೋ ಕಾಲ್​​ ಮಾಡಿರುವ ಆತ, ನೇಣು ಬಿಗಿದುಕೊಂಡಂತೆ ಬೆದರಿಸಲು ಯತ್ನಿಸಿದ್ದಾನೆ. ಆದರೆ ದುರಾದೃಷ್ಟವಶಾತ್ ಅದೇ ನೇಣಿಗೆ ಕುತ್ತಿಗೆ ಬಿಗಿದುಕೊಂಡ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ‌.

    Post Views: 252

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.