Facebook Twitter Instagram
    Wednesday, June 18
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪುತ್ತೂರು: ಮತದಾರರ ಗುರುತಿನ ಚೀಟಿ ಅನಧಿಕೃತ ವಿತರಣೆ: ಜನಸೇವಾ ಕೇಂದ್ರಕ್ಕೆ ಬೀಗ
    ಇತ್ತೀಚಿನ ಸುದ್ದಿ

    ಪುತ್ತೂರು: ಮತದಾರರ ಗುರುತಿನ ಚೀಟಿ ಅನಧಿಕೃತ ವಿತರಣೆ: ಜನಸೇವಾ ಕೇಂದ್ರಕ್ಕೆ ಬೀಗ

    December 6, 2022
    Share

    ಪುತ್ತೂರು: ನಗರದ ಹಳೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಜನಸೇವಾ ಕೇಂದ್ರದಲ್ಲಿ ಮತದಾರರ ಗುರುತಿನ ಚೀಟಿಗಳನ್ನು ಅನಧಿಕೃತವಾಗಿ ವಿತರಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಗಿರೀಶ್‌ ನಂದನ್‌, ತಹಶೀಲ್ದಾರ್‌ ನಿಸರ್ಗ ಪ್ರಿಯ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ದಾಳಿ ಮಾಡಿ ಬೀಗ ಜಡಿದಿದೆ.

    ಗುರುತಿನ ಚೀಟಿ ಕಳೆದುಹೋಗಿದ್ದ ಪುತ್ತೂರಿನ ನಿವಾಸಿಯೋರ್ವರು ಜನಸೇವಾ ಕೇಂದ್ರಕ್ಕೆ ಬಂದು ಮಾಹಿತಿ ನೀಡಿದ್ದರು. ಅಲ್ಲಿನ ಸಿಬಂದಿ ತಾವು ತಯಾರಿಸಿ ಕೊಡುವುದಾಗಿ ಹೇಳಿ ಗುರುತು ಚೀಟಿ ನೀಡಿದ್ದರು. ಆದರೂ ಗುರುತಿನ ಚೀಟಿಯ ಮೇಲೆ ಅನುಮಾನ ಬಂದ ಕಾರಣ ತಾಲೂಕು ಕಚೇರಿಯ ಚುನಾವಣ ಶಾಖೆಗೆ ತೆರಳಿ ತೋರಿಸಿದರು. ಅಧಿಕಾರಿಗಳು ತಪಾಸಣೆ ನಡೆಸಿದಾಗ ಅನುಮತಿ ರಹಿತವಾಗಿ ಗುರುತುಚೀಟಿ ನೀಡಿರುವುದು ಪತ್ತೆಯಾಗಿದೆ.

    ಮತದಾರರ ಗುರುತಿನ ಚೀಟಿ ವಿತರಿಸುವ ಅಧಿಕಾರವನ್ನು ಯಾವುದೇ ಬಾಹ್ಯ ಕೇಂದ್ರಗಳಿಗೆ ಕೊಟ್ಟಿಲ್ಲ ಎಂದು ಎಸಿ ತಿಳಿಸಿದ್ದಾರೆ.

    ನಮ್ಮ ಜನಸೇವಾ ಕೇಂದ್ರದಲ್ಲಿ ನಿರ್ದಿಷ್ಟ ವೆಬ್‌ಸೈಟ್‌ ತೆರೆದುಕೊಂಡ ಕಾರಣ ಲಾಗಿನ್‌ ಆಗಿ ಅರ್ಜಿ ಪ್ರಕ್ರಿಯೆ ನಡೆಸಿ ಕಾರ್ಡ್‌ ಮುದ್ರಿಸಿಕೊಟ್ಟಿದ್ದೇವೆ. ಇದರ ಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಗೆ ಪ್ರಾಯೋಗಿಕ ವಾಗಿ ಮಾಡಿ ತೋರಿಸಿದ್ದೇವೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ ಎಂದು ಕೇಂದ್ರದ ಮಾಲಕಿ ಪ್ರತಿಕ್ರಿಯಿಸಿದ್ದಾರೆ.

    Post Views: 141

    Related Posts

    ಮಂಗಳೂರು: ಮಳೆಯಿಂದಾಗಿ ನಿಯಂತ್ರಣ ತಪ್ಪಿ ಕಾರು ಪಲ್ಟಿ..! ವೈದ್ಯ ಸಾವು

    June 17, 2025

    ಮಂಗಳೂರು: ತಂದೆ ಸೇದಿ ಬಿಸಾಡಿದ ಬೀಡಿ ತುಂಡು ನುಂಗಿ 10 ತಿಂಗಳ ಮಗು ಸಾವು

    June 17, 2025

    ಬಂಟ್ವಾಳ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಹಳ್ಳದಲ್ಲಿ ಪತ್ತೆ

    June 17, 2025
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2025 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.