Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬಂಟ್ವಾಳ: ಅಕ್ರಮ ಮರಳು ಮಾರಾಟ ; ಪೊಲೀಸ್ ದಾಳಿ..!
    ಇತ್ತೀಚಿನ ಸುದ್ದಿ

    ಬಂಟ್ವಾಳ: ಅಕ್ರಮ ಮರಳು ಮಾರಾಟ ; ಪೊಲೀಸ್ ದಾಳಿ..!

    April 30, 2024
    Share

    ಬಂಟ್ವಾಳ: ನೇತ್ರಾವತಿ ನದಿಯ ನಿರ್ಮಾಣ ಹಂತದ ಡ್ಯಾಂ ಬಳಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಹಿಟಾಚಿ, ಟಿಪ್ಪರ್ ಹಾಗೂ ಇತರ ಸಾಮಾಗ್ರಿಗಳ ಸಹಿತ ಮರಳನ್ನು ವಶಕ್ಕೆ ಪಡೆದುಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಆರೋಪಿಗಳನ್ನು ಅಬ್ದುಲ್ ಮುತಾಲಿಬ್ @ ನಾವೂರು ಪುತ್ತಾ ಹಾಗೂ ಇತರರು ಎಂದು ಪೊಲೀಸರು ತಿಳಿಸಿದ್ದಾರೆ, ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ಜಕ್ರಿಬೆಟ್ಟು ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ನಿರ್ಮಾಣ ಹಂತದಲ್ಲಿರುವ ಡ್ಯಾಮ್ ನ ಬಳಿ, ನದಿಯಿಂದ ಕಳ್ಳತನದಿಂದ ಮರಳು ತೆಗೆದು ಅಕ್ರಮವಾಗಿ ಸಾಗಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಬಂದ‌ ಮೇರೆಗೆ, ರಾಮ ಕೃಷ್ಣ ಪಿ ಎಸ್ ಐ (ಕಾ&ಸು) ಬಂಟ್ವಾಳ ನಗರ ಠಾಣೆರವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿದಾಗ, ನದಿಯ ದಡದಲ್ಲಿ ಮರಳನ್ನು ರಾಶಿ ಹಾಕಿರುವುದು ಮತ್ತು 1 ಟಿಪ್ಪರ್ ಲಾರಿ, 1 ಹಿಟಾಚಿ ವಾಹನವನ್ನು ನಿಲ್ಲಿಸಿಕೊಂಡಿರುವುದು ಕಂಡು ಬಂದಿದೆ. ಮರಳು ತೆಗೆಯುತ್ತಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ನದಿಯ ದಡದಲ್ಲಿ ಸುಮಾರು 6-7 ಟಿಪ್ಪರ್ ಲಾರಿ ಲೋಡ್ ಗಳಷ್ಟು ಮರಳನ್ನು ರಾಶಿ ಹಾಕಿದ್ದು, ಮರಳನ್ನು ತೆಗೆಯಲು ಬಳಸಿದ ಹಾರೆ, ಪೈಬರ್ ಬುಟ್ಟಿಗಳು ಹಾಗೂ ಇತರ ಸೊತ್ತುಗಳು ಕಂಡು ಬಂದಿರುತ್ತದೆ. ಮುಂದಿನ ಕಾನೂನು ಕ್ರಮಕ್ಕಾಗಿ ಮರಳನ್ನು ಟಿಪ್ಪರ್ ಲಾರಿಗೆ ತುಂಬಿಸಲು ಬಳಸಿದ ಹಿಟಾಚಿ ವಾಹನ, ಮರಳನ್ನು ತುಂಬಿಸಿ ಸಾಗಾಟ ಮಾಡಲು ನಿಲ್ಲಿಸಿದ್ದ ಕೆಎ-19-ಸಿ-4245ನೇ ಟಿಪ್ಪರ್, ರಾಶಿ ಹಾಕಿದ್ದ ಮರಳು ಮತ್ತು ಇತರೆ ಸೊತ್ತುಗಳನ್ನು ವಶಕ್ಕೆ ಪಡೆದು, ಆರೋಪಿಗಳಾದ ಅಬ್ದುಲ್ ಮುತಾಲಿಬ್ @ ನಾವೂರು ಪುತ್ತಾ ಮತ್ತು ಇತರರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ, ಅ.ಕ್ರ:- 81/2024, ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

    Post Views: 207

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.