ಮನೆಯಿಂದ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯನಗರ ಅಂಬಾಗಿಲಿನ ನಿವಾಸಿ ಸುರೇಶ್ ಪೂಜಾರಿ(54) ಎಂಬವರ ಶವವು ಕೊಡವೂರು ಶಂಕರನಾರಾಯಣ ದೇವಸ್ಥಾನದ ಹಿಂದುಗಡೆ ಡ್ರೈನೇಜ್ ನೀರು ಹರಿಯುವ ಇಂದ್ರಾಣಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುರೇಶ್ ಪೂಜಾರಿ ಅವರು ಕೆಲವು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದ್ರಾಣಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಮೇಲಕ್ಕೆತ್ತಲಾಯಿತು. ಮಲ್ಪೆಯ ಶಬೀರ್, ಮುಸ್ತಾಕ್ ನೆರವಾದರು. ಮಲ್ಪೆ ಪೋಲಿಸ್ ಠಾಣೆಯ ಎ.ಎಸ್. ಐ ಹರೀಶ್ ಕೆ ಅವರು ಮಹಜರು ಪ್ರಕ್ರಿಯೆ ನಡೆಸಿದರು.




