ಮೂಲ್ಕಿ : ರೈಲ್ವೆ ಮೇಲ್ಸೆತುವೆ ಮೇಲೆ ನಡೆದ ಆತ್ಮಹತ್ಯೆ ಪ್ರಕರಣದ ತನಿಖೆಗೆ ಪೊಲೀಸರು ತೆರಳಿದ್ದ ವೇಳೆ ರೈಲೊಂದು ಹಾದು ಹೋದ ಘಟನೆ ನಡೆದಿದ್ದು, ಪೊಲೀಸರು ಹಳಿಯ ಬದಿಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.
ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಬೆವೂರು ರೈಲ್ವೇ ಮೇಲ್ವೇತುವೆಯ ಕೆಳಗಡೆ ಮೂಲ್ಕಿ ರೈಲ್ವೇ ಸ್ಟೇಷನ್ ಸಿಬ್ಬಂದಿ ಕುಮಾರ್ ಎಂಬವರ ಪುತ್ರನಾದ ಮೂಲತಃ ತಮಿಳುನಾಡು ನಿವಾಸಿ ವಿಶ್ಲೇಶ್ (26) ಭಾನುವಾರ ರಾತ್ರಿ 8:30 ಸುಮಾರಿಗೆ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಶ್ಲೇಶ್ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ಸುರತ್ಕಲ್ ಎನ್‌ಐಟಿಕೆ ಯಲ್ಲಿ ತರಬೇತಿ ಮಾಡುತ್ತಿದ್ದರು ಎನ್ನಲಾಗಿದ್ದು, ಕೆಲಸ ಇಲ್ಲದೆ ಇರುವ ಚಿಂತೆ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
ಈ ನಡುವೆ ಯುವಕನ ಆತ್ಮಹತ್ಯೆಯ ತೀವ್ರ ಇಕ್ಕಟ್ಟಾಗಿರುವ ಕುಬೆವೂರು ರೈಲ್ವೆ ಮೇಲ್ವೇತುವೆ ಕೆಳಗಡೆ ನಡೆದಿದ್ದು, ತನಿಖೆಗೆ ಹೋದ ನಾಲ್ವರು ಮೂಲ್ಕಿ ಪೊಲೀಸ್ ಠಾಣೆಯ ಅಧಿಕಾರಿಗಳಾದ ಎಎಸ್‌ಐ ಸಂಜೀವ, ಚಂದ್ರಶೇಖರ್, ಶಂಕರ್ ಬಸವರಾಜ್ ತನಿಖೆ ನಡೆಸುತ್ತಿರುವ ವೇಳೆ ಮತ್ತೊಂದು ರೈಲು ಹಾದು ಹೋಗಿದ್ದು ಕೂಡಲೇ ಬದಿಗೆ ಹಾರಿ ತಪ್ಪಿಸಿಕೊಂಡು ಪವಾಡ ಸದೃಶ ಪಾರಾಗಿದ್ದಾರೆ.