ಇರಾನ್ : ಇಸ್ಲಾಂ ರಾಷ್ಟ್ರ ಇರಾನ್ ನಲ್ಲಿ ಇನ್ನೂ ಹಿಜಬ್ ವಿರೋಧಿಸಿ ಹೋರಾಟ ನಡೆಯುತ್ತಲೇ ಇದ್ದು, ಇದೀಗ ಇರಾನ್‌ನ ಕಟ್ಟುನಿಟ್ಟಾದ ಇಸ್ಲಾಮಿಕ್ ಡ್ರೆಸ್ ಕೋಡ್ ಅನ್ನು ವಿರೋಧಿಸಿ ಯುವತಿಯೊಬ್ಬಳು ಶನಿವಾರ ಇರಾನ್ ವಿಶ್ವವಿದ್ಯಾನಿಲಯದಲ್ಲಿ ಒಳ ಉಡುಪಿನಲ್ಲಿ ರಸ್ತೆಯಲ್ಲಿ ತಿರುಗಾಡಿದ್ದಾಳೆ.
ವಿಶ್ವವಿದ್ಯಾನಿಲಯದ ವಕ್ತಾರ ಅಮೀರ್ ಮಹ್‌ಜಾಬ್ ಅವರು ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು ವಿಧ್ಯಾರ್ಥಿನಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಮಾನಸಿಕ ಅಸ್ವಸ್ಥೆ ಹೊಂದಿದ್ದಾಳೆ ಎಂದಿದ್ದಾರೆ.
ಈ ನಡುವೆ ವಿಧ್ಯಾರ್ಥಿನಿಯನ್ನು ಇರಾನ್ ನ ಮಾರೆಲ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಇರಾನ್ ನಲ್ಲಿ ಮಹಿಳೆಯರ ಮೇಲೆ ವಿಧಿಸುವ ಕಟ್ಟುನಿಟ್ಟಿನ ಡ್ರೆಸ್ ಕೋಡ್ ವಿರೋಧಿಸಿ ವಿಧ್ಯಾರ್ಥಿನಿ ಪ್ರತಿಭಟನೆ ನಡೆಸಿದ್ದಾರೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ವಿಧ್ಯಾರ್ಥಿನಿ ಬಂಧನ ವಿರೋಧಿಸಿ “ಇರಾನ್‌ನ ಅಧಿಕಾರಿಗಳು ತಕ್ಷಣವೇ ಮತ್ತು ಬೇಷರತ್ತಾಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದೆ.