ವಿಟ್ಲ : ಅನಂತಾಡಿ ಗ್ರಾಮದ ಬಂಟ್ರಂಜ ನಿವಾಸಿ ಶೇಖರ ಅವರ ಪುತ್ರಿ, ಬಾಬನಕಟ್ಟೆ ಲಿಖಿತಾ (11) ಜೋಕಾಲಿ ಹಗ್ಗ ಉರುಳಾಗಿ ಮೃತಪಟ್ಟಿದ್ದಾಳೆ.ಆರನೇ ತರಗತಿ ವಿದ್ಯಾರ್ಥಿನಿ ಲಿಖಿತಾ ಅಪ್ಪ,ಅಮ್ಮ ಹೊರ ಹೋದ ಸಂದರ್ಭದಲ್ಲಿ ಮನೆಯಲ್ಲಿ ಜೋಕಾಲಿಯಾಡುತ್ತಿದ್ದಳು.
ತಾಯಿ ವಾಪಸ್ಸ್ ಮನೆಗೆ ಬಂದಾಗ ಲಿಖಿತಾ ಕುತ್ತಿಗೆಗೆ ಜೋಕಾಲಿ ಸುತ್ತಿ ನೇತಾಡುತ್ತಿದ್ದನ್ನು ಕಂಡು ಸ್ಥಳೀಯರನ್ನು ಕರೆದು ಜೋಕಾಲಿಯ ಸೀರೆಯಿಂದ ಲಖಿತಾಳನ್ನು, ಬಿಡಿಸಿದಾಗ ಮೃತಪಟ್ಟಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.