ಕಲಬುರಗಿಯ ಸೈಬರ್ ಕ್ರೈಮ್ ಪೊಲೀಸರು ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಪದವಿಗಳನ್ನು ತಯಾರಿಸಿ ಮಾರಾಟಮಾಡುತ್ತಿದ್ದ ದೊಡ್ಡ ದಂಧೆಯನ್ನು ಪತ್ತೆ ಹಚ್ಚಿದ್ದು, ದೆಹಲಿ ಮೂಲದ ರಾಜೀವ ಸಿಂಗ್ ಆರೋರಾ ಬಂಧಿತ ಆರೋಪಿ.

ಈತನನ್ನು ನವದೆಹಲಿಯ ರಾಮಪಾರ್ಕ್ ಅಪಾರ್ಟ್ಮೆಂಟ್ ದ್ವಾರಕ್ ಮೋಡ್‌ನಲ್ಲಿ ಬಂಧಿಸಲಾಗಿದೆ. 500ಕ್ಕೂ ಹೆಚ್ಚು ನಕಲಿ ಪದವಿ ಪ್ರಮಾಣಪತ್ರಗಳು, ಖಾಲಿ ಪ್ರಮಾಣಪತ್ರಗಳು, ನಕಲಿ
ಸೀಲುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.