ಕಾರ್ಕಳ: ಹೊಟೇಲ್ ಕೆಲಸಕ್ಕೆಂದು ಮುಂಡ್ಕೂರಿನಿಂದ ಶಿಕಾರಿಪುರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬ ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರುದಲ್ಲಿ ನಡೆದಿದೆ.

ನಾಗ ಪ್ರಶಾಂತ್(42) ನಾಪತ್ತೆಯಾದ ವ್ಯಕ್ತಿ. ಶಿಕಾರಿಪುರ ಹೈವೇಯಲ್ಲಿರುವ ದೇವಿಪ್ರಸಾದ್ ರೈ ಎಂಬುವವರ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಲು ಹೋಗಿದ್ದರು. ಆದರೆ ಅವರು ಮದ್ಯಪಾನ ಮಾಡುತ್ತಿದ್ದ ಕಾರಣ ದೇವಿಪ್ರಸಾದ್ ಅವರು ಕೆಲಸಕ್ಕೆ ಸೇರಿಸಿಕೊಳ್ಳದೇ ವಾಪನ್ ಕಳುಹಿಸಿದರು. ತದನಂತರ ಮನೆಯವರಿಗೆ ಎಷ್ಟು ಫೋನ್ ಮಾಡಿದರೂ ಸಿಗುತ್ತಿರಲಿಲ್ಲ. ಅಲ್ಲದೇ ಮೊಬೈಲ್ ಸ್ವಿಚ್ ಆಫ್ ಆಗಿದೆ. ಎ. 3 ರಂದು ಮನೆಯಿಂದ ಹೋದ ಅವರು ವಾಪಸ್ ಬಾರದೆ ಕಾಣೆಯಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕೇಸ್ ದಾಖಲಾಗಿದೆ.