ಕಾಸರಗೋಡು: ಬೈಕ್ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಕಾಸರಗೋಡಿನ ಚೆಮ್ನಾಡ್ ನಲ್ಲಿ ನಡೆದಿದೆ.ಮೇಲ್ಪರಂಬ ಒರವಂಗರದ ಮುಹಮ್ಮದ್ ಹನೀಫ್ (26) ಮೃತಪಟ್ಟವರು.ರಸ್ತೆಯ ಹೊಂಡಕ್ಕೆ ಬಿದ್ದ ಬೈಕ್ ಮೇಲೆ ಹಿಂದಿನಿಂದ ಬಂದ ಲಾರಿ ಹೋಗಿದ್ದು, ಗಂಭೀರ ಗಾಯಗೊಂಡ ಹನೀಫ್ ರನ್ನು ಆಸ್ಪತ್ರೆಗೆ ತಲುಪಿಸಿದರೂ ಅದಾಗಲೇ ಮೃತಪಟ್ಟಿದ್ದರು.ಗಲ್ಫ್ ಉದ್ಯೋಗಿಯಾಗಿದ್ದ ಹನೀಫ್ ರಂಝಾನ್ ಹಬ್ಬದ ಹಿನ್ನಲೆ ಊರಿಗೆ ಬಂದಿದ್ದರು. ಮುಂದಿನ ವಾರ ಅವರು ಮತ್ತೆ ಗಲ್ಫ್ ಗೆ ತೆರಳಬೇಕಿತ್ತು. ಈ ಬಗ್ಗೆ ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
