Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಯುವಕನೋರ್ವನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ…!!
    ಇತ್ತೀಚಿನ ಸುದ್ದಿ

    ಯುವಕನೋರ್ವನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ…!!

    October 31, 2025
    Share

    ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಯುವಕನೋರ್ವನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

    ಹಲ್ಲೆಗೊಳಾಗದ ಯುವಕ ನಿತಿನ್ ಎಂದು ತಿಳಿದು ಬಂದಿದೆ. ಹಲ್ಲೆ ನಡೆಸಿದ ಆರೋಪಿಗಳು ಸಂಪತ್, ಅಭಿಷೇಕ್‌ ಪಾಲನ್, ರಕ್ಷತ್‌, ಸನತ್‌ ಮತ್ತು ಚೇತನ್‌ ಎಂದು ತಿಳಿದು ಬಂದಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪ್ರಕರಣದ ವಿವರ : ಪಿರ್ಯಾದಿದಾರರಾದ ನಿತಿನ್‌ (26), ಹಂದಾಡಿ ಗ್ರಾಮ, ಬ್ರಹ್ಮಾವರ ಇವರು ದಿನಾಂಕ 29/10/2025 ರಂದು ರಾತ್ರಿ 21:15 ಗಂಟೆಯ ವೇಳೆಗೆ ಬಾರ್ಕೂರಿನಲ್ಲಿ ಇರುವಾಗ, 1 ನೇ ಆರೋಪಿ ಸಂಪತ್‌ ಎಂಬಾತನು ‌ ಕರೆ ಮಾಡಿ ಎಲ್ಲಿದ್ದೀಯ ಎಂದು ಕೇಳಿ, ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಸಂಪತ್, ಅಭಿಷೇಕ್‌ ಪಾಲನ್, ರಕ್ಷತ್‌, ಸನತ್‌ ಮತ್ತು ಚೇತನ್‌ ರವರುಗಳು ಬೈಕಿನಲ್ಲಿ ಮತ್ತು ಕಾರಿನಲ್ಲಿ ಬಂದು, ಅವರೆಲ್ಲರೂ ಸೇರಿ ಪಿರ್ಯಾದಿದಾರರನ್ನು ಕಾರಿನಲ್ಲಿ ಎಳೆದು ಕೂರಿಸಿಕೊಂಡು ಬ್ರಹ್ಮಾವರ ತಾಲೂಕು 52 ನೇ ಹೇರೂರು ಗ್ರಾಮದ ಕೆ.ಇ.ಬಿ ಬಳಿ ಇರುವ ಗ್ರೌಂಡ್‌ ಗೆ ಕರೆದುಕೊಂಡು ಹೋಗಿ, ಅಲ್ಲಿ ಪಿರ್ಯಾದಿದಾರರನ್ನು ಕಾರಿನಿಂದ ಕೆಳಗಿಳಿಸಿದ್ದು, ಆ ಕಾರಿನಲ್ಲಿ ತಲವಾರು, ರಾಡ್‌ ಇದ್ದು, ಎಲ್ಲರೂ ಅವರನ್ನು ಸುತ್ತುವರಿದು ನಿಂತು, ಬಳಿಕ 2 ನೇ ಆರೋಪಿತ ಅಭೀಷೇಕ್‌ ಪಾಲನ್‌ ಎಂಬಾತನು ಕೈಯಿಂದ ಪಿರ್ಯಾದಿದಾರರ ಎಡ ಕೆನ್ನೆಗೆ ಹೊಡೆದು ಬಳಿಕ ಅವಾಚ್ಯವಾಗಿ ಬೈದು ಕಾರಿನಿಂದ ರಾಡ್‌ ತೆಗೆದು ಪಿರ್ಯಾದಿದಾರಿಗೆ ಬೀಸಿದಾಗ, ಅದನ್ನು ಕೈಯಿಂದ ಹಿಡಿದಿದ್ದು, ಈ ವೇಳೆ ರಾಡ್‌ ಪಿರ್ಯಾದಿದಾರರ ಡ ಕಿವಿಯ ಬಳಿ ತಾಗಿರುತ್ತದೆ. ಬಳಿಕ ಉಳಿದವರು ಪಿರ್ಯಾದಿದಾರರಿಗೆ ಹಿಂದಿನಿಂದ ದೂಡಿ ಕೈಯಿಂದ ಹೊಡೆದಿರುತ್ತಾರೆ. ಈ ಘಟನೆ ನಡೆಯುವಾಗ ಚೇತನ್‌ ಮತ್ತು ಆಕಾಶ್‌ ಎಂಬುವವರು ಸ್ಥಳದಲ್ಲಿ ಇದ್ದಿರುತ್ತಾರೆ. ಈ ವೇಳೆ ಪಿರ್ಯಾದಿದಾರರ ಬೊಬ್ಬೆ ಹೊಡೆಯುವುದನ್ನು ಕೇಳಿ ಜನರು ಅಲ್ಲಿಗೆ ಬರುವುದನ್ನು ಕಂಡ ಆರೋಪಿತರು ಪಿರ್ಯಾದಿದಾರರನ್ನು ಪುನಃ ಕಾರಿನಲ್ಲಿ ತುಂಬಿಕೊಂಡು ನಂತರ ಸಂಪತ್‌ ಮತ್ತು ಪಾಲನ್‌ ರವರು ಕಾರಿನಲ್ಲಿ ಹೊಟ್ಟೆಗೆ ಮತ್ತು ಕುತ್ತಿಗೆಗೆ ಹೊಡೆದ ಪರಿಣಾಮ ಪಿರ್ಯಾದಿದಾರರು ಪ್ರಜ್ಞೆ ಕಳೆದುಕೊಂಡಿದ್ದು, ಅವರನ್ನು ಬಾರ್ಕೂರು ಬ್ರಿಡ್ಜ್‌ ಬಳಿ ಬಿಟ್ಟು ಹೋಗಿದ್ದು, ಮಧ್ಯರಾತ್ರಿ ವೇಳೆಗೆ ಪಿರ್ಯಾದಿದಾರರು ಎಚ್ಚರಗೊಂಡು ಮನೆಗೆ ಹೋಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 225/2025 ಕಲಂ: 137(2), 109(1), 115(2), 352 ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

    Post Views: 98

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.