ಪಡುಬಿದ್ರಿ: ಹೊಟೇಲ್ ಕೆಲಸಕ್ಕೆ ತೆರಳುತ್ತಿದ್ದ ನೌಕರನೋರ್ವನನ್ನು ಕಾರಿನಲ್ಲಿ ಬಂದ ಕಿಡಿಗೇಡಿಗಳು ಅಪಹರಿಸಲು ಯತ್ನಿಸಿದ ಘಟನೆ ಉಚ್ಚಿಲದಲ್ಲಿ ನಡೆದಿದೆ. ಇಲ್ಲಿನ ಭಾಸ್ಕರನಗರದಿಂದ ಎರ್ಮಾಳು ಗ್ರೀನ್ ಚಿಲ್ಲಿ ಹೊಟೇಲ್ ಗೆ ಹೋಗುತ್ತಿದ್ದ ಮೊಹಮ್ಮದ್ ಶಿನಾಲ್ ನನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾರೆ.

ಅಬ್ದುಲ್ ಮೋಸೀನ್, ಮೊಹಮ್ಮದ್ ಸಂಶೀರ್, ಮೊಹಮ್ಮದ್ ನೌಫಿಲ್ ಹಾಗೂ ಇತರ ಇಬ್ಬರು ಬಂಧಿತ ಆರೋಪಿಗಳು. ಇವರು ಕಾರಿನಲ್ಲಿ ಬಂದು ಉಚ್ಚಿಲದ ಬೆಳಪು ಸೊಸೈಟಿ ಬಳಿ ಶಿಲಾನ್ ನ್ನು ತಡೆದು ನಿಲ್ಲಿಸಿ ಮೊಬೈಲ್ ಕಸಿಯಲು ಯತ್ನಿಸಿದರು.
ಆತನನ್ನು ಕಾರಿನಲ್ಲಿ ಕುಳ್ಳಿರಿಸಲು ಕೂಡಾ ಯತ್ನಿಸಿದ್ದರು. ಆದರೆ ಶಿಲಾನ್ ತಪ್ಪಿಸಿಕೊಂಡು ತನ್ನ ಹೋಟೆಲ್ ಗೆ ಓಡಿ ಹೋಗಿದ್ದಾನೆ. ಅಲ್ಲಿಗೂ ಅವನನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಇಬ್ಬರು ಎಸ್ಕೇಪ್ ಆಗಿದ್ದು ಉಳಿದವರನ್ನು ಅರೆಸ್ಟ್ ಮಾಡಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.