ಬಂಟ್ವಾಳ : ಹುಡುಗಿಯ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಕೊಲೆ ಮಾಡಲು ಯತ್ನಿಸಿ ವಿಫಲವಾಗಿ ಕೈ ಹಸ್ತವನ್ನು ತುಂಡರಿಸಿ ಪರಾರಿಯಾಗಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಮೇ 21ರಂದು ಸಂತೋಷ್ ಎಂಬಾತನ ಅಕ್ಕನ ವಿಚಾರದಲ್ಲಿ ಶಿವರಾಜ್ ಜೊತೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಲು ಹೋಗಿ ಕುತ್ತಿಗೆಗೆ ಕತ್ತಿಯಿಂದ ಕಡಿದಿದ್ದಾನೆ. ಬಳಿಕ ಕೊಲೆ ಮಾಡಿದ ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಆದರೆ ಶಿವರಾಜ್ ಕೈಯನ್ನು ಅಡ್ಡಹಿಡಿದ ಪರಿಣಾಮವಾಗಿ ಕೈ ತುಂಡಾಗಿದೆ. ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಾರಿಯಾಗಿದ್ದ ಸಂತೋಷ್ ಶುಕ್ರವಾರ ಸಂಜೆ ವೇಳೆ ಕಾರ್ಯಚರಣೆಯಲ್ಲಿದ್ದ ನಗರ ಠಾಣಾ ಪೊಲೀಸರ ತಂಡದ ಬಲೆಗೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಈ ಪ್ರಕರಣ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.