ಮಂಗಳೂರು: ರಾಜ್ಯದ ಹಲವೆಡೆ ವಿವಿಧೆಡೆ ಜಾನುವಾರುಗಳಲ್ಲಿ ಹರಡುತ್ತಿರುವ ಚರ್ಮ ಗಂಟು ಕಾಯಿಲೆ ವೈರಾಣುವನ್ನು ನಿಯಂತ್ರಿಸಲು ಲಸಿಕೆ ಅಭಿಯಾನದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ 20,000 ಲಸಿಕೆ ಹಂಚಿಕೆಯಾಗಿದೆ. ಬೆಂಗಳೂರಿನಿಂದ ಸೋಮವಾರ ಸರಬರಾಜು ಆಗಲಿದ್ದು, ಮಂಗಳವಾರದಿಂದ ವಿತರಣೆ ನಡೆಯಲಿದೆ.
ಭಾರತ ಸರ್ಕಾರದ ಮಾರ್ಗಸೂಚಿಯಂತೆ ರೋಗ ಕಾಣಿಸಿಕೊಂಡ 5 ಕಿ.ಮೀ. ಸುತ್ತಳತೆಯಲ್ಲಿ ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ಹಾಕಬೇಕು ಹೀಗಾಗಿ ಮೊದಲ ’ಶಂಕಿತ’ ಚರ್ಮಗಂಟು ರೋಗ ಕಾಣಿಸಿಕೊಂಡ ಬಂಟ್ವಾಳ ತಾಲೂಕಿನ ಬಿಳಿಯೂರು ಸುತ್ತಲಿನ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತು ಕೆಲವೊಂದು ಗೋ ಶಾಲೆಗಳಲ್ಲಿ ಮೊದಲನೇ ಹಂತದಲ್ಲಿ ಲಸಿಕೆ ಹಂಚಿಕೆ ನಡೆಯಲಿದೆ. ಇದಾದ ಕೆಲವೇ ದಿನಗಳಲ್ಲಿ ಮತ್ತಷ್ಟು ಡೋಸ್ ಲಸಿಕೆ ಜಿಲ್ಲೆಗೆ ಸರಬರಾಜಾಗುವ ಸಾಧ್ಯತೆ ಇದೆ.ಕ್ಯಾಪ್ರಿಪಾಕ್ಸ್’ ಎನ್ನುವ ವೈರಾಣುವಿನಿಂದ ಹರಡುವ ಈ ರೋಗ, ಆಫ್ರಿಕಾ ದೇಶದಲ್ಲಿ 1929ರಲ್ಲಿ ಮೊದಲು ಕಾಣಿಸಿ ಕೊಂಡಿತು. ಭಾರತದಲ್ಲಿ 2019ರಲ್ಲಿ ಒಡಿಶಾದಲ್ಲಿ ಮೊದಲ ಬಾರಿ ಪತ್ತೆ ಯಾಗಿತ್ತು. ಬಾಧಿತ ಹಸುವಿನ ಹಾಲನ್ನು ಕುಡಿಯುವುದರಿಂದಲೂ ರೋಗ ಬರುವುದಿಲ್ಲ