ಉಡುಪಿ ವಿಧಾನಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಕೃಷ್ಣಮೂರ್ತಿ ಆಚಾರ್ಯಯವರು ತುಳುನಾಡ ರಕ್ಷಣಾ ವೇದಿಕೆಯ ಬೆಂಬಲಯಾಚಿಸಿದರು.
ಇತ್ತೀಚೆಗೆ ಕರಾವಳಿ ಭಾಗದಲ್ಲಿ ತುಳು ಭಾಷೆಯಾಗಿರಬಹುದು ತುಳುವಿನ ಬಗ್ಗೆ ಜನರಲ್ಲಿ ಅಪಾರವಾದ ಅಭಿಮಾನ ಅದೇ ರೀತಿ ಬೇಡಿಕೆ ಉಂಟಾಗಿದ್ದು ಈ ಸಂದರ್ಭದಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ತುಳು ಶಾಲು,ತುಳು ಫ್ಲಾಗ್ ಗಳನ್ನು ಬಳಸುತ್ತಿರುವುದು ಕಂಡು ಬಂದಿದೆ. ಈ ಮಧ್ಯೆ ಹಲವಾರು ಅಭ್ಯರ್ಥಿಗಳು ಬೇರೆ ಬೇರೆ ತುಳು ಪರ ಸಂಘಟನೆ ಮುಖಂಡರುಗಳನ್ನು ಭೇಟಿಯಾಗಿ ಬೆಂಬಲ ಯಾಚಿಸುವುದು ಕಂಡು ಬಂದಿದೆ.
ಈ ಮಧ್ಯೆ ಉಡುಪಿ ವಿಧಾನಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಕೃಷ್ಣಮೂರ್ತಿಯವರು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, ಉಡುಪಿ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿ ಹಾಗೂ ಉಡುಪಿ ಪ್ರಧಾನ ಕಾರ್ಯದರ್ಶಿ ಅಝರುದ್ದೀನ್ ಸುಬ್ರಹ್ಮಣ್ಯ ನಗರ, ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬರವರಲ್ಲಿ ಮಾತುಕತೆ ನಡೆಸಿ ಬೆಂಬಲ ನೀಡುವಂತೆ ಕೋರಿದರು.
ತುಳುನಾಡ ತುಳು ಭಾಷೆ ತುಳು ಅಭಿವೃದ್ಧಿಗೋಸ್ಕರ ಶ್ರಮಿಸುವುದು ಅದೇ ರೀತಿ ಸೇರಿದಂತೆ ನನ್ನ ಪ್ರಣಾಳಿಕೆಯಲ್ಲಿ ತುಳು ಪರವಾಗಿರುವಂತಹ ಹೆಚ್ಚಿನ ಬೇಡಿಕೆಗಳನ್ನು ನಾನು ಪ್ರಣಾಳಿಕೆಯಲ್ಲಿ ನಮೂದಿಸುವುದಾಗಿ ತಿಳಿಸಿರುತ್ತಾರೆ.
ತುಳುನಾಡ ರಕ್ಷಣಾ ವೇದಿಕೆ ಕಳೆದ 2 ದಶಕಗಳಿಂದ ತುಳುನಾಡಿನ ಹಲವಾರು ಸಮಸ್ಯೆಗಳ ಬಗ್ಗೆ ಜನಪರ ಹೋರಾಟ ನಡೆಸಿ
ದೇಶದ ವಿವಿಧ ಭಾಗಗಳಲ್ಲಿ ಶಾಖೆಗಳನ್ನು ಹೊಂದಿದ್ದು ತಮ್ಮದೇ ಬೆಂಬಲಿಗರ ಪಡೆಯನ್ನು ಹೊಂದಿದೆ. ರಾಜಕೀಯ ರಹಿತ ಸಂಘಟನೆಯಾಗಿದ್ದು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುವ ಮೂಲಕ ತುಳುಪರ ಸಂಘಟನೆಯವರು ಕೃಷ್ಣಮೂರ್ತಿ ಆಚಾರ್ಯಯವರ ಕೈ ಬಲಪಡಿಸುವರೇ ? ಕಾದು ನೋಡಬೇಕಾಗಿದೆ.