ಮಂಗಳೂರು: ಮಂಗಳೂರಿನಲ್ಲಿ ನಡೆದಿರುವ ಕುಕ್ಕರ್ ಬಾಂಬ್ ಸ್ಪೋಟ ದಿನದಿಂದ ದಿನಕ್ಕೆ ತಿರುವುಪಡೆದುಕೊಳ್ಳುತ್ತಿದ್ದು, ಈ ನಡುವೆ ಪ್ರಕರಣ ಸಂಬಂಧ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಾನೂನು ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ.
ಘಟನೆ ಸಂಬಂಧ ಸದ್ಯ ಮೈಸೂರಿನಲ್ಲಿ ಉಗ್ರ ತಾರಿಖ್ ವಾಸವಿದ್ದ ಮನೆಯಲ್ಲಿ ಹಲವು ಸ್ಪೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಅಂತ ತಿಳಿಸಿದ್ದಾರೆ.
ಇನ್ನೂ ಈ ನಡುವೆ ಮಂಗಳೂರಿಗೆ ತೆರಳುವ ಮುನ್ನ ಕುಕ್ಕರ್ ಬಾಂಬ್ ಕೈಯಲ್ಲಿಡಿದು ಫೋಟೋಗೆ ಪೋಸ್ ನೀಡಿದ್ದ ಎನ್ನಲಾಗಿದೆ ಅದರ ಫೋಟೋಗಳು ವೈರಲ್ ಆಗಿದ್ದಾವೆ.
ಶಂಕಿತ ಉಗ್ರನ ಮನೆಯಲ್ಲಿ ಹಲವು ಸ್ಪೋಟಕ ಪತ್ತೆಯಾಗಿದೆ ಅಂಥ ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಅವರು ಇದೇ ವೇಳೇ ಘಟನೆಯಲ್ಲಿ ಚಾಲಕನಿಗೆ ಹಾಗೂ ಪ್ರಯಾಣಕನಿಗೆ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂಧ ಪೋಲಿಸರು ತನಿಖೆ ಮಾಡಿದ ವೇಳೆಯಲ್ಲಿ ಘಟನೆಯಲ್ಲಿ ಪ್ರಯಾಣಿಕರ ಮುಖ ಶೇ 40 ಸುಟ್ಟು ಹೋಗಿತ್ತು, ಈ ನಡುವೆ ಘಟನೆ ಸಂಬಂಧ ಗುರುತು ಪತ್ತೆ ಮಾಡುವ ಸಲುವಾಗಿ ಹಿರಿಯ ಅಧಿಕಾರಿಗಳು ಕೂಡಲೇ ತನಿಖೆ ನಡೆಸಿದ್ದಾರೆ. ಪ್ರಕರಣದ ಆರೋಪಿ ಆಧಾರ್ ಕಾರ್ಡ್ ನಲ್ಲಿ ಹುಬ್ಬಳ್ಳಿಯ ಪ್ರೇಮ್ ರಾಜ್ ವಿಳಾಸ ಇತ್ತು, ಆದರೆ ಅದನ್ನ ಚೆಕ್ ಮಾಡಿದಾಗ ಪ್ರೇಮ್ ರಾಜ್ ತುಮಕೂರಿನಲ್ಲಿ ಇರೋದು ಗೊತ್ತಾಯಿತು. ಪ್ರೇಮ್ ರಾಜ್ ಆಧಾರ್ ಕಾರ್ಡ್ ಕಳೆದು ಹೋಗಿದ್ದು ಗೊತ್ತಾಯಿತು, ಅದೇ ದಿನ ರಾತ್ರಿ ನಾವು ಅವನು ಬಂದ ಜಾಗ ಪತ್ತೆ ಮಾಡಿದೆವು.ತನಿಖೆ ನಡೆಸುತ್ತಿದ್ದ ವೇಳೇಯಲ್ಲಿ ಕೇಂದ್ರ ತನಿಖಾ ತಂಡದಿಂದ ಸಹಾಯ ಪಡೆಯಲಾಯಿತು, ಗಾಯಾಳು ವ್ಯಕ್ತಿ ಮೈಸೂರಿನಲ್ಲಿ ಮೋಹನ್ ಕುಮಾರ್ ಎನ್ನುವವರ ಮನೆಯಲ್ಲಿ ಬಾಡಿಗೆ ಇದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಶಿವಮೊಗ್ಗ ನಡೆದ ಗಲಾಟೆ ಬಳಿಕ ಪರಾರಿಯಾಗಿದ್ದ, ಆತ ನಾನಾ ಕಡೆಗಳಲ್ಲಿ ಸಂಚಾರ ಮಾಡುತ್ತಿದ್ದ, ಇದಲ್ಲದೇ ಶಂಕಿತ ಉಗ್ರ ವಾಸವಿದ್ದ ಮನೆಯಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಈಗಾಗಲೇ ಎರಡು ತಂಡಗಳನ್ನು ರಚನೆ ಮಾಡಿದ್ದು, ಈಗಾಗಲೇ ಶಂಕಿತ ಉಗ್ರ ಯಾರೆಲ್ಲ ಜೊತೆಗೆ ಸಂಪರ್ಕ ಹೊಂದಿದ್ದು, ಶಿವಮೊಗ್ಗದಿಂದ ಪರಾರಿಯಾದ ಬಳಿಕ ಎರಡು ತಿಂಗಳು ಯಾರೆಲ್ಲ ಜೊತೆಗೆ ಈತ ಇದ್ದ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಇದಲ್ಲದೇ ಇಂಚಿಚೂ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ವಾರದ ಹಿಂದೆ ಒಮ್ಮೆ ಆತ ಮಂಗಳೂರಿಗೆ ಆಗಮಿಸಿದ್ದ ಎನ್ನಲಾಗಿದ್ದು, ಸದ್ಯ ಪ್ರಕರಣ ಸಂಬಂದ ಮೂವರನ್ನು ವಶಕ್ಕೆ ಪಡೆದಿದ್ದು, ಈ ಪೈಕಿ ಮೈಸೂರಿನ ಇಬ್ಬರು, ಹಾಗೂ ಮಂಗಳೂರಿನವರು ಗಿದ್ದು ಸದ್ಯ ಆತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಚಿಕಿತ್ಸೆ ಬಳಿಕ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗುವುದು. ಇದಲ್ಲದೇ ತೀರ್ಥ ಹಳ್ಳಿಯ ಅರಾಫ್ ಎನ್ನುವವನು ಕಳೆದ ಎರಡುತಿಂಗಳಿನಿಂದ ನಾಪತ್ತೆಯಾಗಿದ್ದು, ಆತನಿಗಾಗಿ ಕೂಡ ಶೋಧ ನಡೆಸಲಾಗುತ್ತಿದೆ. ಹಣಕಾಸಿನ ವರ್ಗಾವಣೆ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಅಂತ ತಿಳಿಸಿದ್ದಾರೆ