ಮಂಗಳೂರು : ಅಕ್ರಮವಾಗಿ, ಅಬಕಾರಿ ಕಾಯ್ದೆಯ ವಿರುದ್ಧ ವಿವಿಧ ಬ್ರಾಂಡಿನ 11.50 ಲೀ. ಡಿಫೆನ್ಸ್ ಲಿಕ್ಕರ್ ಅನ್ನು ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಶ್ಯಾಮ್ ಸುಂದರ್ ಬಿನ್ ಬಿ ವಿ ಕೃಷ್ಣನ್ ನಂಬಿಯಾರ್ ಎಂಬವನನ್ನು ಬಂಧಿಸಲಾಗಿದೆ.ನ. 17 ರಂದು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವೆಲೆನ್ಸಿಯದಲ್ಲಿರುವ ರೋಶನಿ ನಿಲಯ ಪ್ರದೇಶದ ಅಪಾರ್ಟೆಂಟ್ ವೊಂದರ ಮುಂಭಾಗದ ರಸ್ತೆಯಲ್ಲಿ ಯಾವುದೇ ದಾಖಲಾತಿಗಳಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ 11.50 ಲೀ. ಮದ್ಯದ ಬಾಟೆಲ್ ನ್ನು ಆರೋಪಿ ಸಂಗ್ರಹಿಸಿದ್ದ. ಮಾಹಿತಿ ಪಡೆದ ಅಧಿಕಾರಿಗಳು ಕರ್ನಾಟಕ ಅಬಕಾರಿ ಕಾಯ್ದೆ 1965 ರ ನಿಯಮ 11, 14, 15 ರಂತೆ ಅಪರಾಧವಾದ ಕಲಂ 32(1) ಮತ್ತು 38(ಎ) ರಂತೆ ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.