ಪಿಎಂಜೆಡಿವೈ ಯೋಜನೆಯಡಿ ಸಾಲ ಮಂಜೂರು ಮಾಡಿಕೊಡುವುದಾಗಿ ನಂಬಿಸಿ ಸಾವಿರಾರು ರೂ. ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ಲೇಟ್ ಮಾಡುವ ವ್ಯವಹಾರಕ್ಕೆ ಪಿಎಂಜೆಡಿವೈ ಯೋಜನೆಯಡಿ ಜನ್‌ಧನ್ ಸಬ್ಸಿಡಿ ಲೋನ್ ಮಂಜೂರು ಮಾಡಿ ಕೊಡುವುದಾಗಿಯೂ ಬಿದ್ಕಲ್‌ಕಟ್ಟೆಯ ಹರ್ಷವರ್ಧನ (40) ಎಂಬವರಿಗೆ ಡಿ.29ರಂದು ಫೇಸ್‌ಬುಕ್ ಸಂದೇಶ ಬಂದಿದ್ದು ಅದರಂತೆ ಅವರು ಅದರಲ್ಲಿ ನಮೂದಿಸಿದ ನಂಬರಿಗೆ ಕರೆ ಮಾಡಿದ್ದರು.
ಸಾಲಕ್ಕಾಗಿ ಇವರು ವೈಯಕ್ತಿಕ ಗುರುತಿನ ದಾಖಲೆಗಳನ್ನು ಕಳುಹಿಸಿದ್ದರು. ಸಾಲ ಮಂಜೂರಾತಿಗೆ ವಿವಿಧ ಶುಲ್ಕ ಪಾವತಿಸಲು ಸೂಚಿಸಿದಂತೆ ಹರ್ಷ ವರ್ಧನ ಹಂತ ಹಂತವಾಗಿ ಒಟ್ಟು 98,551ರೂ. ಹಣವನ್ನು ಪಾವತಿಸಿದರು. ಆದರೆ ಹರ್ಷವರ್ಧನಗೆ ಸಾಲ ಮಂಜೂರು ಮಾಡಿಕೊಡದೆ ನಂಬಿಸಿ ವಂಚಿಸಿರುವುದಾಗಿ ದೂರಲಾಗಿದೆ.