ಕಟಪಾಡಿ: ದ್ವಿ ಚಕ್ರ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಜ.10ರ ಶುಕ್ರವಾರ ತಡರಾತ್ರಿ ಉದ್ಯಾವರ ಬಲೈ ಪಾದೆ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಉಡುಪಿಯ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ, ಬೈಕ್ ಸವಾರ ಪಣಿಯೂರು ನಿವಾಸಿ, ಆನಂದ ಆಚಾರ್ಯ ಅವರ ಪುತ್ರ ಅವಿನಾಶ್ ಆಚಾರ್ಯ (18) ಗಂಭೀರ ಗಾಯಗೊಂಡ ಯುವಕ.
ಅಪಘಾತದ ಸಂದರ್ಭ ಲಾರಿಯ ಅಡಿಭಾಗದಲ್ಲಿ ಬೈಕ್ ಸಿಲುಕಿಕೊಂಡಿದ್ದು ಈ ವೇಳೆ ಬೈಕಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬೈಕ್ ಹಾಗೂ ಲಾರಿ ಬೆಂಕಿಗಾಹುತಿಯಾಗಿದೆ.