ಮಂಗಳೂರು: ಕುಡಿದ ಮತ್ತಿನಲ್ಲಿ ಲಾರಿ ಚಾಲಕನೋರ್ವ ಎರ್ರಾಬಿರ್ರಿಯಾಗಿ ವಾಹನ ಚಲಾಯಿಸಿದ ಘಟನೆ ಮಂಗಳೂರಿನ ಪಂಪ್‌ವೆಲ್‌ನಲ್ಲಿ ನಡೆದಿದೆ.

ಗ್ಯಾಸ್ ಸಿಲಿಂಡರ್ ಹೊತ್ತುಕೊಂಡು ಬರುತ್ತಿದ್ದ ಈ ಲಾರಿಯು ಚಾಲಕನ ನಿರ್ಲಕ್ಷ್ಯ ದಿಂದ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಈ ವೇಳೆ ಚಾಲಕನನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, ಸಾರ್ವಜನಿಕರ ವಿರುದ್ಧ ಲಾರಿ ಚಾಲಕ ಎಗರಾಡಿದ್ದಾನೆಂದು ತಿಳಿದು ಬಂದಿದೆ.
ಅಲ್ಲದೇ ಸಾರ್ವಜನಿಕರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಚಾಲಕ ಮತ್ತೆ ವಾಹನ ಚಲಾಯಿಸಿದ್ದಾನೆಂದು ತಿಳಿದು ಬಂದಿದೆ.