ನವದೆಹಲಿ : ಇಂದು ನಾವು ನಿಮಗೆ ಹೋಟೆಲ್ ಒಂದರ ಬಗ್ಗೆ ಹೇಳುತ್ತಿದ್ದೇವೆ. ಈ ಹೋಟೆಲ್ ಕಟ್ಟಿ 25 ವರ್ಷಗಳು ಕಳೆದಿವೆ. ಇನ್ನಿದಕ್ಕೆ 16 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಆದ್ರೆ, ಇಲ್ಲಿಯವರೆಗೆ ಒಬ್ಬ ಅತಿಥಿಯೂ ಇಲ್ಲಿಗೆ ಬಂದಿಲ್ಲ. ಹಾಗಾಗಿ ಈಗ ಸರ್ಕಾರ ಈ ಹೋಟೆಲ್ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ.
ಈ ಹೋಟೆಲ್‌ನ ಹೆಸರು Ryugyong.
ಈ ಹೋಟೆಲ್ ಎಲ್ಲಿದೆ.?
ವರದಿಯ ಪ್ರಕಾರ, Ryugyong ಹೋಟೆಲ್ ಉತ್ತರ ಕೊರಿಯಾದ ರಾಜಧಾನಿ Pyongyang ನಲ್ಲಿದೆ. ಈ ಹೋಟೆಲ್’ನ್ನ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಅವರ ಮನೆಯಿಂದ ಸುಮಾರು 12 ಮೈಲಿ (19.3 ಕಿಲೋಮೀಟರ್) ದೂರದಲ್ಲಿ ನಿರ್ಮಿಸಲಾಗಿದೆ. ಈ ಹೋಟೆಲ್‌ನ ಎತ್ತರ 1082 ಅಡಿಗಳು ಇದರಲ್ಲಿ 3000 ಕೊಠಡಿಗಳನ್ನ ನಿರ್ಮಿಸಲು ಯೋಜಿಸಲಾಗಿತ್ತು. ಈ ಹೋಟೆಲ್ ದೇಶದ ಆರ್ಥಿಕ ಮತ್ತು ರಾಜಕೀಯ ಶಕ್ತಿಗೆ ವಿಭಿನ್ನವಾದ ಗುರುತನ್ನ ನೀಡುತ್ತಿತ್ತು. ಆದ್ರೆ, 25 ವರ್ಷಗಳ ನಂತ್ರವೂ ಈ ಹೋಟೆಲ್ ಖಾಲಿ ಬಿದ್ದಿದೆ. ಈಗ ಈ ಹೋಟೆಲ್’ನ್ನ ‘ಹೋಟೆಲ್ ಆಫ್ ಡೂಮ್’ ಎಂದು ಕರೆಯಲಾಗುತ್ತದೆ.
1987ರಲ್ಲಿ ಈ ಹೋಟೆಲ್ ಪ್ರಾರಂಭ.!
Ryugyong ಹೋಟೆಲ್ 1987ರಲ್ಲಿ ನಿರ್ಮಾಣವನ್ನ ಪ್ರಾರಂಭಿಸಿತು. ಆಗ 2 ವರ್ಷಗಳ ನಂತರವೇ ಈ ಹೋಟೆಲ್ ತೆರೆಯುವ ಉದ್ದೇಶವಿತ್ತು. ಈ ಹೋಟೆಲ್ ನಿಗದಿತ ಸಮಯದಲ್ಲಿ ಪೂರ್ಣಗೊಂಡಿದ್ದರೆ, ಇದು ವಿಶ್ವದ ಅತಿ ಎತ್ತರದ ಹೋಟೆಲ್ ಆಗುತ್ತಿತ್ತು. ಪ್ರಸ್ತುತ, ಈ ಹೋಟೆಲ್ ಭೂಮಿಯ ಮೇಲಿನ ಅತಿ ಎತ್ತರದ ಖಾಲಿ ಕಟ್ಟಡ ಎಂಬ ದಾಖಲೆಯನ್ನು ಹೊಂದಿದೆ. ಈ ಹೋಟೆಲ್ ನಿರ್ಮಾಣದ ವೆಚ್ಚ £1.6 ಬಿಲಿಯನ್ 16 ಸಾವಿರ ಕೋಟಿ. 1992ರಲ್ಲಿ ಈ ಹೊಟೇಲ್‌ನ ನಿರ್ಮಾಣ ಕಾರ್ಯ ನಿಂತುಹೋಯಿತು.
ಈಗ ಈ ಹೋಟೆಲ್ ಬಗ್ಗೆ ಪ್ರಚಾರ.!
ಹೋಟೆಲ್‌ನಲ್ಲಿ ಏನೂ ಆಗದೇ ಸುಮ್ಮನೆ ಬಿದ್ದಿರುವುದನ್ನು ನೋಡಿ ಈ ಹೋಟೆಲ್‌ನಲ್ಲಿ ಬಾಹ್ಯ ಗಾಜಿನ ಫಲಕಗಳನ್ನು ಅಳವಡಿಸಲಾಗಿದೆ. ಇದಾದ ಬಳಿಕ 2013ರೊಳಗೆ ಪೂರ್ಣಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ ಇದು ಇಂದಿಗೂ ಪೂರ್ಣಗೊಂಡಿಲ್ಲ. ಈ ಹೋಟೆಲ್ ಒಳಗಿನಿಂದ ಸಂಪೂರ್ಣವಾಗಿ ಖಾಲಿಯಾಗಿದೆ. ಇದರೊಂದಿಗೆ ಈ ಕಟ್ಟಡದಲ್ಲಿ ಹಲವು ಲೋಪದೋಷಗಳಿವೆ. ಈ ಕಟ್ಟಡದ ನೆಲ ಇಳಿಜಾರಾಗಿದೆಯಂತೆ. ಈ ಹೋಟೆಲ್‌ನ ರಚನೆಯು ತುಕ್ಕು ಹಿಡಿದು ದುರ್ಬಲವಾಗಿದೆ. 2018 ರಲ್ಲಿ ಈ ಕಟ್ಟಡದ ಮೇಲೆ ಎಲ್‌ಇಡಿ ಫಲಕಗಳನ್ನ ಅಳವಡಿಸಲಾಗಿದೆ. ಇದನ್ನ ಈಗ ಸರ್ಕಾರ ಪ್ರಚಾರಕ್ಕೆ ಬಳಸಿಕೊಂಡಿದೆ.