ಎಂಸಿ.ಸಿ.ಬ್ಯಾ0ಕಿನ 113ನೇ ಸಂಸ್ಥಾಪಕರ ದಿನಾಚರಣೆಯನ್ನು ದಿನಾಂಕ 10.05.2025ರ0ದು ಎಂ.ಸಿ.ಸಿ. ಬ್ಯಾಂಕಿನ ಆಡಳಿತ ಕಛೇರಿಯ ಅವರಣದಲ್ಲಿ ಆಚರಿಸಲಾಯಿತು. ಈ ಆಚರಣೆಯು ಬ್ಯಾಂಕಿನ ಸಂಸ್ಥಾಪಕ ಶ್ರೀ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಅವರ ಪರಂಪರೆಗೆ ಗೌರವ ಸಲ್ಲಿಸಿ ಸಹಕಾರಿ ವಲಯದಲ್ಲಿ ಬ್ಯಾಂಕಿನ ನಿರಂತರ ಪ್ರಗತಿಯನ್ನು ಗುರುತಿಸಿತು. ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಬ್ಯಾಂಕಿನ ಇತಿಹಾಸ ಮತ್ತು ಪ್ರಗತಿಯ ಕುರಿತಾದ ಸಾಕ್ಷಚಿತ್ರವನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು.


ಬ್ಯಾ0ಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಪಿಆರ್‌ಒ ವಂ. ಫಾ| ಡೆನಿಸ್ ಡೆಸಾ, ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಪ್ರಾಂತಿಯ ಸುಪಿರೀಯರ್ ವಂ. ಸಿ| ಕ್ಲಾರ ಮಿನೇಜಸ್, ಯುಎಫ್‌ಸಿ, ಪ್ರಜ್ಞ ಕೌನ್ಸೆಲಿಂಗ್
ಸೆ0ಟರ್‌ನ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್, ಮಂಗಳೂರು ಕೊOಕಣ್ಸ್ ದುಬಾಯ್, ಅಧ್ಯಕ್ಷ ಶ್ರೀ ಸ್ಟೇಫನ್ ಮಿನೇಜಸ್ ಮತ್ತು ಬ್ಯಾಂಕಿನ ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜಸ್ ಹಾಜರಿದ್ದರು.

ಸ್ವಾಗತ ಭಾಷಣದಲ್ಲಿ ಶ್ರೀ ಅನಿಲ್ ಲೋಬೊ ಅವರು, ಗಣ್ಯರು, ಆಡಳಿತ ಮಂಡಳಿ ಸದಸ್ಯರು. ಸಿಬ್ಬಂದಿ ಹಾಗೂ ಅತಿಥಿಗಳನ್ನು ಸ್ವಾತಿಸಿದರು. ಅವರು ಎಂ.ಸಿ.ಸಿ. ಬ್ಯಾಂಕಿನ ರೂಪಾಂತರ, ಸೇವೆ ಮತ್ತು ಕಾರ್ಯಕ್ಷಮತೆಯಲ್ಲಿ ರಾಷ್ಟಿçÃಕೃತ ಬ್ಯಾಂಕುಗಳೊAದಿಗೆ ಬ್ಯಾAಕಿನ ಸಮಾನತೆಯನ್ನು ಎತ್ತಿ ತೋರಿಸಿದರು. ವಂ. ಫಾ| ಡೆನಿಸ್
ಡೆಸಾ ಅವರ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರನ್ನೂ ಸ್ಪೂರ್ತಿಯ ಮೂಲ ಮತ್ತು ವೃತ್ತಿಪರತೆಯ
ಸಂಕೇತವೆAದು ಶ್ಲಾಘಿಸಿದರು. ಬ್ಯಾಂಕಿನ ಪ್ರಗತಿ, ಸಾದನೆಯನ್ನು ವಿವರಿಸಿ ಸಂಸ್ಥಾಪಕರ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯ ಪ್ರಯುಕ್ತ ಸಂಸ್ಥಾಪಕ ಶ್ರೀ ಪಿ.ಎಫ್. ಎಕ್ಸ್ ಸಲ್ಡಾನ್ಹಾರವರ ಕುಟುಂಬದ ಸದಸ್ಯರು ಮತ್ತು ವೇದಿಕೆಯಲ್ಲಿರುವ ಗಣ್ಯರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ವಂ.ಫಾ| ಡೆನಿಸ್ ಡೆಸಾ ಮಾತನಾಡಿ ಪ್ರಗತಿಯತ್ತ ಮುನ್ನುಗ್ಗುತ್ತಿರುವ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ
ಸದಸ್ಯರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಮೂರು ಪ್ರಮುಖ ತತ್ವಗಳಲ್ಲಿ ಬೇರೂರಿರುವ ಸ್ಪೂರ್ತಿದಾಯಕ ಸಂದೇಶವನ್ನು ಅವರು ಈ ಸಂದರ್ಭದಲ್ಲಿ ನೀಡಿದರು. 1)
ಕ್ರತಜ್ಞತೆಯಿಂದ ಹಿಂದಿರುಗಿ ನೋಡುವುದು, ಸಂಸ್ಥೆಯ ಪರAಪರೆ ಮತ್ತು ಅಡಿಪಾಯದ ಮೌಲ್ಯಗಳನ್ನು ಆಚರಿಸುವುದು.
2) ಸ್ವಯಂ ಮೌಲ್ಯಮಾಪನವನ್ನು ಮಾಡುವುದು, ವಿಶ್ಲೇಷಣೆ ಮತ್ತು ಅಪಾಯಗಳನ್ನು ತೆಗೆದುಕೊಳ್ಳುವ ದೈರ್ಯದ ಮೂಲಕ ಅತ್ಮಾವಲೋಕನವನ್ನು ಪ್ರೊತ್ಸಾಹಿಸುವುದು.
3) ದೇವರಲ್ಲಿ ನಂಬಿಕೆಯಿಟ್ಟು ಮುಂದೆ ಸಾಗುವುದು. ಬ್ಯಾಂಕಿನ ಸಿಬ್ಬಂದಿಗಳು ಶ್ರದ್ದೆಯಿಂದ ಇರಲು, ಸಹಾನುಭೂತಿಯಿಂದ
ಸೇವೆ ಸಲ್ಲಿಸಲು ಮತ್ತು ಗ್ರಾಹಕರನ್ನು ನಗುವಿನೊಂದಿಗೆ ಸ0ಪರ್ಕಿಸಲು ಅವರು ಒತ್ತಾಯಿಸಿದರು. ಪಾನೀರ್‌ನ ದಿ ಮರ್ಸಿಡ್ ಅನಾಥಾಶ್ರಮ ಮತ್ತು ಕಂಕನಾಡಿಯ ಶಾಲೋಮ್ ಟ್ರಸ್ಟ್ಗೆ ಈ ಸಂದರ್ಭದಲ್ಲಿ ದೇಣಿಗೆಯನ್ನು ವಿತರಿಸಲಾಯಿತು.
ವಂ.ಸಿ| ಕ್ಲಾರಾ ಮಿನೇಜಸ್‌ರವರು ಬ್ಯಾಂಕಿನ ಪ್ರಗತಿಯನ್ನು ತೋರಿಸುವ ಬುಲೆಟಿನ್ ಅನ್ನು ಬಿಡುಗಡೆ ಮಾಡಿ ಬ್ಯಾಂಕಿನ ಪ್ರಗತಿಯನ್ನು ಶ್ಲಾಘಿಸಿದರು. ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವಲ್ಲಿ ಅವಕಾಶ, ತಾಳ್ಮೆ, ವೃತ್ತಿಪರತೆ ಮತ್ತು ಕಠಿಣ ಪರಿಶ್ರಮದ ಮಹತ್ವವನ್ನು ಒತ್ತಿ ಹೇಳಿದರು. ಹೊಸದಾಗಿ ಸಿಎ ಪರೀಕ್ಷೇಯಲ್ಲಿ ಉತ್ತೀರ್ಣರಾದ ಗ್ರಾಹಕರ ಮಕ್ಕಳಾದ ಚಾರ್ಟರ್ಡ್ ಅಕೌಂಟೆAಟ್‌ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸಂತ ಅಲೋಶಿಯಸ್ ಕಾಲೇಜಿನ ಪ್ರೊಫೆಸರ್ ಮತ್ತು ಎಂಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷರಾದ ಡಾ| ಎಡ್ಮಂಡ್ ಜೆ.ಬಿ. ಫ್ರಾಂಕ್ ಮತ್ತು ಎಂ.ಸಿ.ಸಿ. ಬ್ಯಾAಕಿನ ಮಾಜಿ ನಿರ್ದೇಶಕರು ಮತ್ತು ಬರಹಗಾರ ಶ್ರೀ ಮಾರ್ಸೆಲ್ ಎಂ. ಡಿಸೋಜ, ಮಂಗಳೂರು ಕೊಂಕಣ್ಸ್ ದುಬೈನ ಹೊಸದಾಗಿ ಆಯ್ಕೆಯಾದ ಶ್ರೀ ಸ್ಟೀಫನ್ ಮಿನೇಜಸ್ ಇವರು ಸಮುದಾಯಕ್ಕೆ ನೀಡಿದ ಶ್ಘಾಘನೀಯ ಸೇವೆಗಾಗಿ ಸನ್ಮಾನಿಸಲಾಯಿತು. ಸಿಎ ಲಯ್ನಾಲ್ ನೋರೊನ್ಹಾರವರು ಬ್ಯಾಂಕಿನ ಇತಿಹಾಸ, ಪ್ರಗತಿಯನ್ನು ವಿವರಿಸಿ, ಅಧ್ಯಕ್ಷರು ಮತ್ತು ಆಡಳಿತ ಮಂಡಳಿಗೆ ಅಭಿನಂದಿಸಿದರು. ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟ ವಿಸ್ವಾಸದಿಂದ ಬ್ಯಾಂಕ್ ಮುನ್ನಡೆಯುತ್ತಿದೆ ಎಂದರು. ಯಶಸ್ಸು ಕೇವಲ ಫಲಿತಾಂಶಗಳ ಬಗ್ಗೆ ಅಲ್ಲ, ಅದರೆ ಅದನ್ನು ಸಾಧಿಸುವಲ್ಲಿ, ಸಮಗ್ರತೆ ಮತ್ತು ತತ್ವಗಳ ಬಗ್ಗೆ ನೆನಪಿಸಿದರು.
ಕಳೆದ 50 ವರ್ಷಗಳಿಂದ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಪ್ರಜ್ಞ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಬ್ಯಾಂಕಿಗೆ ಧನ್ಯವಾದ ಸಲ್ಲಿಸಿ ಸೇವೆಯಲ್ಲಿ ಸಹಾನೂಭೂತಿಯ ಮಹತ್ವವನ್ನು ಒತ್ತಿ ಹೇಳಿದರು.
ಬ್ಯಾಂಕಿನ ನಿರ್ದೇಶಕರಾದ ಶ್ರೀ ಅನಿಲ್ ಪತ್ರಾವೊ, ಶ್ರೀ ಅಂಡ್ರು÷್ಯ ಡಿಸೋಜ, ಶ್ರೀ ಹೆರಾಲ್ಡ್ ಮೊಂತೇರೊ, ಶ್ರೀ ರೋಶನ್ ಡಿಸೋಜ, ಡಾ| ಜೆರಾಲ್ಡ್ ಪಿಂಟೊ, ಶ್ರೀ ಮೆಲ್ವಿನ್ ವಾಸ್, ಶ್ರೀ ಸಿ.ಜಿ.ಪಿಂಟೊ, ಶ್ರೀಮತಿ ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೋಜ. ಶ್ರೀಮತಿ ಶರ್ಮಿಳಾ ಮಿನೇಜಸ್, ಶ್ರೀ ಫೆಲಿಕ್ಸ್ ಡಿಕ್ರುಜ್ ಮತ್ತು ಶ್ರೀ ಆಲ್ವಿನ್ ಪಿ. ಮೊಂತೇರೊ ಹಾಜರಿದ್ದರು, ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿ, ಗ್ರೀಶ್ಮಾ ಸಲ್ಡಾನ್ಹಾ, ನೀರ್‌ಮಾರ್ಗ ನಿರೂಪಿಸಿದರು.