ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಪ್ರಸಿದ್ಧ ಮುಧೋಳದ ನಾಯಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಹೊಣೆ ಹೊತ್ತಿರುವ ವಿಶೇಷ ರಕ್ಷಣಾ ಗುಂಪಿನ (ಎಸ್ಪಿಜಿ) ಭಾಗವಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತಿಮ್ಮಾಪುರದ ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥರಾಗಿರುವ ಡಾ.ಸುಶಾಂತ್ ಹಂದಗೆ ಎರಡು ತಿಂಗಳ ವಯಸ್ಸಿನ ಎರಡು ಗಂಡು ಮುಧೋಳ ಮರಿಗಳನ್ನು ಏಪ್ರಿಲ್ 25, 2022 ರಂದು ಎಸ್ಪಿಜಿಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಅಂತ ಹೇಳಿದ್ದಾರೆ.
ಏಪ್ರಿಲ್ 25 ರಂದು ನಾಯಿಮರಿಗಳನ್ನು ಸಂಗ್ರಹಿಸಲು ಎಸ್ಪಿಜಿಯ ಪಶುವೈದ್ಯರು ಮತ್ತು ಇಬ್ಬರು ತರಬೇತುದಾರರು ಬಂದಿದ್ದರು ಸೂಕ್ಷ್ಮತೆಯಿಂದಾಗಿ, ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳದಂತೆ ನಮ್ಮನ್ನು ಕೇಳಲಾಗಿದೆ ಅಂಥ ಅವರು ಇದೇ ವೇಳೆ ಹೇಳಿದ್ದಾರೆ.
‘ಯಾವುದೇ ಮರಿಗಳು ಲಭ್ಯವಿದೆಯೇ ಎಂದು ಅಧಿಕಾರಿಗಳು ನಮ್ಮನ್ನು ಕೇಳಿದರು. ಅವರು ಮರಿಗಳನ್ನು ಪ್ರಯೋಗಗಳಿಗಾಗಿ ಬಯಸುತ್ತಾರೆ ಎಂದು ನಮಗೆ ತಿಳಿದಿರಲಿಲ್ಲ. ಅಗತ್ಯ ಪರೀಕ್ಷೆಗಳು ಮತ್ತು ಕಾರ್ಯಾಚರಣೆಗಳನ್ನು ನಡೆಸಿದ ನಂತರ, ಎರಡು ಮರಿಗಳನ್ನು ಆಯ್ಕೆ ಮಾಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು’ ಎಂದು ಅವರು ಹೇಳಿದರು.