ಮಂಗಳೂರು : ಆನ್ ಲೈನ್ ನಲ್ಲಿ ಅದರಲ್ಲೂ ಟಿಲಿಗ್ರಾಂ ಮೂಲಕ ಬಂದಿರುವ ಸಂದೇಶ ನಂಬಿ ಹಣ ಹೂಡಿಕೆ ಮಾಡಿ ಹಲವು ಜನರು ಮೋಸ ಹೋಗುತ್ತಿದ್ದಾರೆ. ಇಂಥಹದೇ ವಂಚನೆಗೆ ಸುಳ್ಯದ ಯುವಕ ಸಿಲುಕಿದ್ದು ಪ್ರಕರಣ ದಾಖಲಾಗಿದೆ.

ಸುಳ್ಯದ ಹಳೆಗೇಟು ನಿವಾಸಿ ಮುಹಮ್ಮದ್ ಕೈಫ್ ಎಮ್.ಎಸ್ (23 ವರ್ಷ) ಅವರ ಮೊಬೈಲ್ ನಂಬ್ರ ಗೆ ಕರೆ ಮಾಡಿ Devnet Private Company ಯಲ್ಲಿ Part time Job work from home ನೀಡುವುದಾಗಿ ಹೇಳಿದ್ದರು.ಬಳಿಕ Task Complete ಮಾಡಲು ಎಂದು ತಿಳಿಸಿ ಒಂದು brand name ಕಳುಹಿಸಿದ್ದು, ಸದ್ರಿ brand ನ್ನು Google ನಲ್ಲಿ Search ಮಾಡಿ Screenshot ತೆಗೆದು ಕಳುಹಿಸಲು ತಿಳಿಸಿದ್ದು, ಅದರಂತೆ ಕಳುಹಿಸಿರುತ್ತಾರೆ. ನಂತರ Telegram ಖಾತೆಯಲ್ಲಿ Task Complete ಮಾಡುವ ಬಗ್ಗೆ ಮಾಹಿತಿ ನೀಡಿದ್ದರು.
ಅದರಂತೆ Task Complete ಮಾಡಿದ್ದಕ್ಕೆ ರೂ. 150/- ಬ್ಯಾಂಕ್ ಖಾತೆಗೆ ಹಾಕಿದ್ದರು. ನಂತರ Part Time Job ಬಗ್ಗೆ ಮಾಹಿತಿ ನೀಡಿ Website Link (ಪ್ರಸ್ತುತ ಸದ್ರಿ ಲಿಂಕ್ ಇರುವುದಿಲ್ಲ) ಗೆ Register ಆಗಲು ತಿಳಿಸಿದ್ದಕ್ಕೆ ಸದ್ರಿಯವರು User ID Password , ಹಾಕಿ Register ಆಗಿದ್ದರು. ನಂತರ ರೂ. 1,000/- ಹಣವನ್ನು ಹಾಕಿದ್ದಕ್ಕೆ ರೂ.1,400/- ಹಣವನ್ನು ಮತ್ತು ರೂ. 5,000/- ಹಣವನ್ನು ಹಾಕಿದ್ದಕ್ಕೆ ರೂ.7,250/- ಹಣವನ್ನು ಕಮೀಷನ್ ರೂಪದಲ್ಲಿ ಫಿರ್ಯಾದಿದಾರರ ಬ್ಯಾಂಕ್ ಖಾತೆಗೆ ಹಾಕಿದ್ದರು. ನಂತರ Task ಮಾಡಲು ಇನ್ನು ಹೆಚ್ಚಿನ ಹಣ ಹಾಕಲು ತಿಳಿಸಿದ್ದಕ್ಕೆ ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ಹಣ ವರ್ಗಾವಣೆ ಮಾಡಿದ್ದರು. ನಂತರ ಯಾವುದೇ ಹಣ ವಾಪಾಸ್ ಹಾಕದೇ ಮೋಸಮಾಡಿರುವುದಾಗಿದೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸು ಠಾಣೆ ದ.ಕ.ಜಿಲ್ಲೆ ಮಂಗಳೂರು ಅ.ಕ್ರ:21/2025 ಕಲಂ :66 (C ), 66 ( D) IT ACT 318(4 ) ,319(2 )BNS Act ಯಂತೆ ಪ್ರಕರಣ ದಾಖಲಾಗಿದೆ.