ಮಂಗಳೂರು: ಪ್ರಸಕ್ತ ಋತುವಿನ ಏಳನೇ ವಿಹಾರ ನೌಕೆ ‘ಎಂವಿ ಇನ್‌ಸಿಗ್ನಿಯಾ’ ಬುಧವಾರ ನವಮಂಗಳೂರು ಬಂದರಿಗೆ ಆಗಮಿಸಿದೆ. ಮಾರ್ಷಲ್ ಐಲ್ಯಾಂಡ್ ಫ್ಲ್ಯಾಗ್ಡ್ ಹಡಗು ಒಟ್ಟು 466 ಪ್ರಯಾಣಿಕರು ಮತ್ತು 399 ಸಿಬ್ಬಂದಿ ಒಳಗೊಂಡಿತ್ತು.
ಈ ಹಡಗಿನ ಒಟ್ಟಾರೆ ಉದ್ದವು 180.05 ಮೀಟರ್ ಆಗಿದ್ದು, 30,277 ಒಟ್ಟು ಟನ್ನೇಜ್ ಸಾಗಿಸುವ ಸಾಮರ್ಥ್ಯ ಮತ್ತು 6 ಮೀಟರ್ ಡ್ರಾಫ್ಟ್ ಹೊಂದಿದೆ. ಮಿಯಾಮಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಓಷಿಯಾನಿಯಾ ಕ್ರೂಸಸ್, ಹಡಗಿನ ಮಾಲೀಕತ್ವವನ್ನು ನಿರ್ವಹಿಸುತ್ತಿದೆ. ನಾರ್ವೇಜಿಯನ್ ಕ್ರೂಸ್ ಲೈನ್‌ನ ಅಂಗಸಂಸ್ಥೆಯಾಗಿದೆ. ಫುಜೈರಾ ಮತ್ತು ಮುಂಬೈ ಬಂದರುಗಳಿಂದ ನೌಕಾಯಾನ ಮಾಡುವ ಹಡಗಿನ ಕೊನೆಯ ಬಂದರು ಗೋವಾದ ಮೊರ್ಮುಗೋ ಬಂದರು. ಮಂಗಳೂರಿನಿಂದ ಹೊರಡುವ ಹಡಗು ನಂತರ ಕೊಚ್ಚಿನ್ ಬಂದರಿಗೆ ಪ್ರಯಾಣಿಸಲಿದೆ. “ಹೋಲ್ಡಿಂಗ್ಸ್ ಲಿಮಿಟೆಡ್”, ಪ್ರಮುಖ ಜಾಗತಿಕ ಕ್ರೂಸ್ ಬ್ರಾಂಡ್‌ಗಳ ವೈವಿಧ್ಯಮಯ ಕ್ರೂಸ್ ಆಪರೇಟರ್, ಇದರಲ್ಲಿ ನಾರ್ವೇಜಿಯನ್ ಕ್ರೂಸ್ ಲೈನ್, ಓಷಿಯಾನಿಯಾ ಕ್ರೂಸಸ್ ಮತ್ತು ರೀಜೆಂಟ್ ಸೆವೆನ್ ಸೀಸ್ ಕ್ರೂಸಸ್ ಗಳು ಸೇರಿವೆ.
ಹಡಗಿನಿಂದ ಇಳಿಯುವಾಗ ಕ್ರೂಸ್ ಪ್ರಯಾಣಿಕರಿಗೆ ಡ್ರಮ್ ಬಾರಿಸುವ ಮೂಲಕ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಪ್ರಯಾಣಿಕರು ಕ್ರೂಸ್ ಲಾಂಜ್‌ನಲ್ಲಿ ಆಯುಷ್ ಇಲಾಖೆಯಿಂದ ಸ್ಥಾಪಿಸಲಾದ ಧ್ಯಾನ ಕೇಂದ್ರದ ಪ್ರಯೋಜನಗಳನ್ನು ಪಡೆದರು. ಅವರಿಗಾಗಿ ಬಟ್ಟೆ ಮತ್ತು ಕರಕುಶಲ ಮಳಿಗೆಗಳನ್ನು ಸಹ ತೆರೆಯಲಾಗಿತ್ತು. ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಸ್ಥಾಪಿಸಿರುವ ಸೆಲ್ಫಿ ಸ್ಟ್ಯಾಂಡ್ ಮುಂದೆ ಪ್ರವಾಸಿಗರು ಫೋಟೋಗಳನ್ನು ಸಹ ಕ್ಲಿಕ್ಕಿಸಿಕೊಂಡರು. ಬಂದರು ಪ್ರಯಾಣಿಕರ ಮನರಂಜನೆಗಾಗಿ ಕ್ರೂಸ್ ಲಾಂಜ್‌ನಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸಿತ್ತು. ಹೀಗೆ ಅನೇಕ ಸೌಲಭ್ಯಗಳನ್ನು ಹೊಂದಿರುವ ಈ ಹಡಗು ಅತ್ಯಾಕರ್ಶಕವಾಗಿರುವುದಂತೂ ಸತ್ಯ.