ಮಂಗಳೂರು: ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ಮಂಗಳೂರು 6ನೇ ಜೆಎಂಎಫ್ ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಪೂಜಾಶ್ರೀ ಅವರು ಆರೋಪಿಗಳಾದ ಬೊಕ್ಕಪಟ್ಟದ ಮೋನಿಕ್ ಮತ್ತು ಕೋಡಿಕಲ್ನ ಅಖಲ್ಗೆ ಒಂದು ತಿಂಗಳ ಜೈಲು ಶಿಕ್ಷೆ ಮತ್ತು 1000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಜನಾರ್ದನ್ ವಾದ ಮಂಡಿಸಿದರು. ಏಪ್ರಿಲ್ 17, 2021 ರಂದು, ಸುಲ್ತಾನ್ ಬತ್ತೇರಿಯಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಕೆಲವು ಮಾಹಿತಿ ಪಡೆದ ಎಸ್ಸೆ ಹಾರೂನ್ ಅಕ್ತರ್ ದಾಳಿ ನಡೆಸಿ 500 ಗ್ರಾಂ ಗಾಂಜಾವನ್ನು ಪತ್ತೆ ಮಾಡಿದ್ದರು. ಅವರು ಈ ಬಗ್ಗೆ ತನಿಖೆ ನಡೆಸಿ ನಂತರ ಎಸ್ಟಿ ಶೋಭಾ ಅವರು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ನೀಡಿದ್ದರು