ಬಂಟ್ವಾಳ : ಅಕ್ರಮವಾಗಿ ಕಳ್ಳ ಬಟ್ಟಿಯನ್ನು ತಯಾರಿಸುತ್ತಿದ್ದ ಮನೆಗೆ ದಾಳಿ ನಡೆಸಿರುವ ಬಂಟ್ವಾಳ ಅಬಕಾರಿ ಪೋಲೀಸರ ತಂಡವು ಆರೋಪಿ ಸಹಿತವಾಗಿ ಕಳ್ಳಬಟ್ಟಿಯನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಬಂಟ್ವಾಳದ ಪಂಜಿಕಲ್ಲು ಎಂಬಲ್ಲಿ ನಡೆದಿದೆ.
ಪಂಜಿಕಲ್ಲು ಗ್ರಾಮದ ಕಂಬಲ್ದಡ್ಕ ನಿವಾಸಿಯಾಗಿರುವ ರುಕ್ಮಯ ಪೂಜಾರಿ ಬಂಧನಕ್ಕೆ ಒಳಗಾದ ಆರೋಪಿಯಾಗಿದ್ದಾರೆ. ರುಕ್ಮಯ ಪೂಜಾರಿ ಅವರ ಮನೆಗೆ ದಾಳಿ ನಡೆಸಿರುವ ಅಬಕಾರಿ ಪೋಲೀಸರು 1.5 ಲೀಟರ್ ಸಾರಾಯಿ, 55 ಲೀ.ಬೆಲ್ಲದ ಕೊಳೆ ಮತ್ತು ಕಳ್ಳಬಟ್ಟಿ ತಯಾರಿಸಲು ಬಳಸುತ್ತಿದ್ದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಬಕಾರಿ ಉಪನಿರೀಕ್ಷಕರಾದ ರಾಜನಾಯ್ಕ್ ನೇತ್ರತ್ವದಲ್ಲಿ ಈ ಕಾರ್ಯಚರಣೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.