Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: MCC ಬ್ಯಾಂಕ್ ಅಧ್ಯಕ್ಷನ ಹೆಸರು ಹೇಳಿ, ವೀಡಿಯೋ ಮಾಡಿ ನೇಣಿಗೆ ಶರಣಾದ ವ್ಯಕ್ತಿ
    ಇತ್ತೀಚಿನ ಸುದ್ದಿ

    ಮಂಗಳೂರು: MCC ಬ್ಯಾಂಕ್ ಅಧ್ಯಕ್ಷನ ಹೆಸರು ಹೇಳಿ, ವೀಡಿಯೋ ಮಾಡಿ ನೇಣಿಗೆ ಶರಣಾದ ವ್ಯಕ್ತಿ

    December 18, 2024
    Share

    ಮಂಗಳೂರು: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅವರ ಹೆಸರು ಹೇಳಿ ವ್ಯಕ್ತಿಯೊಬ್ಬರು ನೇಣಿಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮನೋಹರ್ ಪಿರೇರಾ ಅವರು ಉಳಾಯಿಬೆಟ್ಟುವಿನ ಕುಟಿನೋ ಪದವಿನಲ್ಲಿರುವ ತಮ್ಮ ಮನೆಯ ಮೇಲೆ ಎಂಸಿಸಿ ಬ್ಯಾಂಕ್‌ನಲ್ಲಿ 10ವರ್ಷಗಳ ಹಿಂದೆ ಸಾಲ ಪಡೆದಿದ್ದರು. ಈ ಸಾಲದ ಕಂತನ್ನು ಅವರ ದೊಡ್ಡಣ್ಣ ಮೆಲ್ಬಮ್‌ರವರು ತೀರಿಸುತ್ತಿದ್ದರು. ಕೊರೊನಾ ಸಂದರ್ಭ ಮೆಲ್ಬಮ್‌ರವರಿಗೆ ವ್ಯವಹಾರದಲ್ಲಿ ನಷ್ಟ ಉಂಟಾಗಿ ಲೋನ್ ಕಂತು ಬ್ಯಾಂಕಿಗೆ ಕಟ್ಟಲು ಸಾಧ್ಯವಾಗಿರಲಿಲ್ಲ. ಆದ್ದರಿಂದ 2ವರ್ಷಗಳ ಹಿಂದೆ ಬ್ಯಾಂಕ್‌ನವರು ಮನೆಯನ್ನು ಸೀಜ್ ಮಾಡಿದ್ದರು. ಇದರಿಂದ ಮನೋಹರ್ ಪಿರೇರಾರಿಗೆ ಮಾನಸಿಕ ಖಿನ್ನತೆ ಉಂಟಾಗಿ 2 ಸಲ ಹೃದಯಾಘಾತವಾಗಿತ್ತು. ಬಳಿಕ ಅವರ ಅತ್ತೆ 2023ರ ಫೆಬ್ರವರಿಯಲ್ಲಿ ಮನೋಹರ್‌ರವರ ಬ್ಯಾಂಕ್ ಖಾತೆಗೆ 15 ಲಕ್ಷ ಕಳಿಸಿದ್ದಾರೆ. ಈ ಹಣದಲ್ಲಿ ಬ್ಯಾಂಕ್ ಸಾಲ ತೀರಿಸುವ ಬಗ್ಗೆ ಮನೋಹರ್ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋರೊಂದಿಗೆ ಮಾತನಾಡಿ ಸೆಲ್ಸ್ ಚೆಕ್ ನೀಡಿದ್ದರು. ಬಳಿಕ ಬ್ಯಾಂಕಿನವರು ಸೀಜ್ ಮಾಡಿದ ಮನೆಯನ್ನು 6 ತಿಂಗಳ ಹಿಂದೆ ವಾಪಸ್ ವಾಸಕ್ಕೆ ಬಿಟ್ಟು ಕೊಟ್ಟಿದ್ದರು. ಲೋನ್ ಕಂತು ಇನ್ನೂ ಕೂಡ ಬಾಕಿ ಇರುವುದರಿಂದ ಮನೋಹರ್‌ರವರು ಮಾನಸಿಕವಾಗಿ ನೊಂದು ಡಿಸೆಂಬರ್ 17ರಂದು ಸಂಜೆ 3.45 ರಿಂದ 5ಗಂಟೆಯ ಒಳಗೆ ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ಮೊಬೈಲ್ ವೀಡಿಯೊ ಮಾಡಿ ತುಳು ಭಾಷೆಯಲ್ಲಿ ‘MCC ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸೀಜ್ ಮಾಡಿರುವ ಮನೆಗೆ ತಾನು 15 ಲಕ್ಷ ಕೊಟ್ಟಿದ್ದೇನೆ. ಆದರೆ ಆತ 9 ಲಕ್ಷ ತಿಂದಿದ್ದಾನೆ’ ಎಂದು ಹೇಳಿದ್ದಾರೆ. ತನ್ನ ಅತ್ತೆ ಕಳುಹಿಸಿದ್ದ 15 ಲಕ್ಷ ಹಣದಲ್ಲಿ 9 ಲಕ್ಷ ರೂ. ಹಣವನ್ನು ಬ್ಯಾಂಕ್ ಅಧ್ಯಕ್ಷ ಸೆಲ್ಫ್ ಚೆಕ್ ಮೂಲಕ ತೆಗೆದುಕೊಂಡಿದ್ದರಿಂದ ಮನೆಯ ಮೇಲಿನ ಸಾಲ ಇನ್ನೂ ತೀರಿಲ್ಲ ಎಂಬ ಹತಾಶೆಯಿಂದ ಮನೋಹರ್ ಪಿರೇರಾ ಅವರ ಅನಾರೋಗ್ಯ ಉಲ್ಬಣಿಸಿ ಮಾನಸಿಕ ಖಿನ್ನತೆಗೊಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ MCC ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಪ್ರಕರಣ ದಾಖಲಾಗಿದೆ.

    Post Views: 249

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.