Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಧಾರ್ಮಿಕ ಹಬ್ಬ, ಆಚರಣೆಗೆ ಪೊಲೀಸರು ಅಡ್ಡಿಪಡಿಸಿಲ್ಲ; ಕಮಿಷನರ್ ಸ್ಪಷ್ಟನೆ
    ಇತ್ತೀಚಿನ ಸುದ್ದಿ

    ಮಂಗಳೂರು: ಧಾರ್ಮಿಕ ಹಬ್ಬ, ಆಚರಣೆಗೆ ಪೊಲೀಸರು ಅಡ್ಡಿಪಡಿಸಿಲ್ಲ; ಕಮಿಷನರ್ ಸ್ಪಷ್ಟನೆ

    September 13, 2025
    Share

    ಮಂಗಳೂರು: ಯಾವುದೇ ಹಬ್ಬ ಆಚರಣೆಗೆ ಪೊಲೀಸರು ಎಲ್ಲೂ ತೊಂದರೆ ಕೊಟ್ಟಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಮೈಕ್‌ ಅಳವಡಿಸುತ್ತಿರುವುದಕ್ಕಷ್ಟೇ ನಮ್ಮ ನಿರ್ಬಂಧ ಇರುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತೆ ಸ್ಪಷ್ಟ ಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೆಹರೂ ಮೈದಾನದಲ್ಲಿ ಗಣೇಶೋತ್ಸವದ ಹಬ್ಬ ಭಾರೀ ಸಂಭ್ರಮದಿಂದ ನಡೆದಿದೆ. ರಾತ್ರಿ 2.30ರವರೆಗೆ ನಡೆದಿದೆ. ಆದರೆ ಪೊಲೀಸರು ಎಲ್ಲೂ ಅಡ್ಡಿ ಪಡಿಸಿಲ್ಲ. ನಾವು ಮಾಡುವ ಸೆಲಬ್ರೇಷನ್‌ನಿಂದ ನಮಗೆ ಸಂಭ್ರಮ ಇರಬೇಕು. ಆದರೆ ಬೇರೆಯವರಿಗೆ ಅದರಿಂದ ತೊಂದರೆ ಆಗಬಾರದು. ಮೈದಾನದಲ್ಲಿ ಕಾರ್ಯಕ್ರಮ ಮಾಡುವಾಗ 50 ಮೀಟರ್ ಇದ್ದರೆ ಶಬ್ದ 50 ಮೀಟರ್‌ಗಷ್ಟೇ ಇರಲಿ. ಶಾಂತಿ ಸಭೆ ಮಾಡಿದ್ದಾಗ ಸ್ಥಳೀಯರೇ ಬಂದು ನಮಗೆ ಮೈಕ್‌ ಬೇಡ ಎಂದು ಹೇಳಿದ್ದಾರೆ. ಮತ್ತೆ ಈಗ ಪೊಲೀಸರಿಂದ ತೊಂದರೆ ಆಗುತ್ತಿದೆ ಎಂದು ಹೇಳಿದರೆ ಹೇಗೆ..? ಸ್ಥಳೀಯ ಠಾಣಾ ಇನ್‌ಸ್ಪೆಕ್ಟರ್ ಮೈಕಿಗೆ ಅನುಮತಿ ಕೊಡುತ್ತಾರೆ. ಅವರು ಸೂಕ್ತ ಕ್ರಮ ವಹಿಸುತ್ತಾರೆ ಎಂದರು. ಇನ್ನು ಯಕ್ಷಗಾನವೊಂದನ್ನು ಪೊಲೀಸರು ಬಂದು ಸ್ಥಗಿತಗೊಳಿಸಿದ್ದಾರಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಅದು ನಮ್ಮ ಲಿಮಿಟ್‌ನಲ್ಲಿ ಆಗುವ ಘಟನೆ ಅಲ್ಲ ಎಂದು ಸ್ಪಷ್ಟಪಡಿಸಿದರು.  

    Post Views: 110

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.