ಉಡುಪಿ: ತೆಳ್ಳಾರು ರಸ್ತೆ 11ನೇ ಕ್ರಾಸ್‌ನ ಮರತ್ತಪ್ಪ ಶೆಟ್ಟಿ ಕಾಲನಿಯ ಕಿಶೋರ್ ಕುಮಾರ್ ಶೆಟ್ಟಿ ಅವರ ಮನೆಯಲ್ಲಿ ಚಾರ್ಜ್‌ಗಿಟ್ಟ ಮೊಬೈಲ್ ಸ್ಫೋಟಗೊಂಡು ಇಡೀ ಮನೆ ಸುಟ್ಟುಹೋಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಸಂಭವಿಸಿದೆ.

ಎರಡು ಅಂತಸ್ತುಗಳ 6 ಕೋಣೆಗಳ ಮನೆಯಲ್ಲಿ ಮುಂಜಾನೆ 4 ಗಂಟೆ ವೇಳೆಗೆ ಅವಘಡ ಸಂಭವಿಸಿದೆ.
ಮೊಬೈಲನ್ನು ಸೋಫಾದ ಮೇಲೆ ಇರಿಸಿದ್ದ ಕಾರಣ ಸ್ಫೋಟಗೊಂಡ ಕೂಡಲೇ ಬೆಂಕಿ ಹತ್ತಿಕೊಂಡು ಇಡೀ ಮನೆಯನ್ನು ಆವರಿಸಿತು. ಮಾಹಿತಿ ತಿಳಿದ ತತ್‌ಕ್ಷಣ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿ ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಈ ವೇಳೆ ಮನೆಯಲ್ಲಿ ಎಸಿ ಆನ್ ಇದ್ದುದು ಕೂಡ ಬೆಂಕಿ ವ್ಯಾಪಿಸಲು ಕಾರಣವಾಯಿತು ಎನ್ನಲಾಗಿದೆ.
ಮನೆಯ ಮಾಲಕ ಕಿಶೋರ್ ಕುಮಾರ್ ಶೆಟ್ಟಿ ಅವರಿಗೆ ಬೆಂಕಿಯಿಂದ ಸಣ್ಣಪುಟ್ಟ ಗಾಯಗಳಾಗಿವೆ.
ಠಾಣಾಧಿಕಾರಿ ಆಲ್ಪರ್ಟ್ ಮೊನಿಸ್, ಪ್ರಮುಖರಾದ ಹರಿಪ್ರಸಾದ್ ಶೆಟ್ಟಿಗಾರ್, ಚಾಲಕ ಜಯ ಮೂಲ್ಯ, ರವಿಚಂದ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.