ಉಪ್ಪಿನಂಗಡಿ : ಹಿರಿಯ ನಾಗರಿಕರೊಬ್ಬರನ್ನು ಬೈಕ್ ನಲ್ಲಿ ಆಗಮಿಸಿದ ಅಪರಿಚಿತ ಯುವಕನೋರ್ವ ಪರಿಚಿತನಂತೆ ಮಾತನಾಡಿಸಿ, ಕೊರೋನ ಸಂದರ್ಭದಲ್ಲಿ ಪ್ರಧಾನಿ ಮೋದಿಯ ಹಣ ಬೇಕಾದಷ್ಟು ಬಂದಿದೆ. ಅದನ್ನು ನಿಮಗೆ ಸಿಗುವ ಹಾಗೆ ಮಾಡುತ್ತೇನೆ ಎಂದು ನಂಬಿಸಿ ಅದಕ್ಕಾಗಿ ಏಳು ಸಾವಿರ ರೂ. ಪಡೆದು ವಂಚಿಸಿ ಪರಾರಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಪದ್ಮುಂಜ ಸಮೀಪದ ದೇವಪ್ಪ ಗೌಡ (65)ಎಂಬವರು ಉಪ್ಪಿನಂಗಡಿಯಲ್ಲಿ ಅಡಿಕೆ ಮಾರಾಟ ಮಾಡಿ ಹಿಂದಿರುಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಆಗಮಿಸಿದ ಯುವಕನೋರ್ವ, ನಾನು ನಿಮ್ಮ ಮಗಳ ಶಾಲಾ ಸಹಪಾಠಿ ಮೋಹನ್ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದಲ್ಲದೆ, ತಾನೀಗ ಕೆನರಾ ಬ್ಯಾಂಕ್‌ನಲ್ಲಿರೋದು. ಕೊರೋನ ಸಂದರ್ಭದಲ್ಲಿ ಬಂದ ಮೋದಿಯವರ ಹಣ ಬ್ಯಾಂಕ್‌ನಲ್ಲಿ ಹಾಗೆನೇ ಕೊಳೆಯುತ್ತಾ ಇದೆ. ಅದನ್ನು ಯಾರ ಅಕೌಂಟ್‌ಗೂ ಹಾಕಬಹುದು. ನಿಮ್ಮ ಪಾಸ್ ಪುಸ್ತಕ, ಆಧಾರ್ ಕಾರ್ಡ್‌ನ ಜೆರಾಕ್ಸ್ ಕಾಪಿ ಕೊಟ್ಟರೆ ಸಾಕು. ಅದಕ್ಕಾಗಿ ನೀವು ನನಗೆ 7 ಸಾವಿರ ರೂ. ನೀಡಿದರೆ ಸಾಕು ಎಂದೆಲ್ಲಾ ಮಾತಿನಲ್ಲಿ ನಂಬಿಸಿದ್ದಾನೆ. ಆತನ ಮಾತನ್ನು ನಂಬಿದ ವೃದ್ಧ ಅಡಿಕೆ ಮಾರಾಟದಿಂದ ಬಂದಿರುವ ಹಣದಿಂದ 7,000 ರೂ.ನ್ನು ಆತನ ಕೈಗಿತ್ತು. ಪಾಸ್ ಪುಸ್ತಕ ಹಾಗೂ ಆಧಾರ್ ಕಾರ್ಡ್ ಜೆರಾಕ್ಸ್ ತರಲು ಹೋಗಿದ್ದಾರೆ.