ನವದೆಹಲಿ : ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೆಂಪುಕೋಟೆ ಮೇಲೆ ಸತತ 9 ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ದೇಶವಾಸಿಗಳಿಗೆ ಶುಭಾಶಯಗಳು.
ಅನೇಕ ಅಭಿನಂದನೆಗಳು. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವಕ್ಕಾಗಿ ನಾನು ವಿಶ್ವದಾದ್ಯಂತ ಹರಡಿರುವ ಭಾರತದ ಪ್ರೇಮಿಗಳನ್ನು, ಭಾರತೀಯರನ್ನು ಅಭಿನಂದಿಸುತ್ತೇನೆ.
ಇಂದು ಐತಿಹಾಸಿಕ ದಿನವಾಗಿದ್ದು, ಜಗತ್ತಿನಾದ್ಯಂತ ತ್ರಿವರ್ಣಧ್ವಜ ಹಾರಾಡುತ್ತಿದೆ. ಇಡೀ ದೇಶ ಇಂದು ಹೊಸ ಸಂಕಲ್ಪ ಮಾಡುತ್ತಿದೆ. ಗುಲಾಮಗರಿಯಿಂದ ಹೊರ ಬರಲು ಒಟ್ಟಾಗಿ ಹೋರಾಟ ಮಾಡಲಾಗಿತ್ತು. ದೇಶದ ಮೂಲೆ ಮೂಲೆಯಲ್ಲೂ ಹೋರಾಟ ನಡೆದಿತ್ತು.
ಮಂಗಲ್ ಪಾಂಡೆ, ವೀರ ಸಾವರ್ಕರ್, ಭಗತ್ ಸಿಂಗ್, ಗಾಂಧೀಜಿ, ಜವಹಾರ್ ಲಾಲ್ ನೆಹರೂ ಸೇರಿದಂತೆ ಹಲವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ದೇಶದ ನಾರಿ ಶಕ್ತಿ ಏನ್ನು ಅನ್ನೋದು ಸ್ವಾತಂತ್ರ್ಯ ಹೋರಾಟದಲ್ಲಿ ಸಾಬೀತಾಗಿದೆ. ಭಾರತದ ಮೇಲಿನ ಪ್ರೀತಿಗಾಗಿ ತ್ಯಾಗ ಬಲಿದಾನ ದೇಶಕ್ಕಾಗಿ ಜೀವ ಕೊಟ್ಟವರನ್ನು ಎಂದೂ ಮರೆಯಬಾರದು ಎಂದು ಹೇಳಿದ್ದಾರೆ.