ಮಂಗಳೂರು: ಬ್ಯಾಂಕ್ ಲಾಕರ್ ಅತ್ಯಂತ ಸುರಕ್ಷಿತ ಇಲ್ಲಿಡುವ ದಾಖಲೆಗಳು ಮತ್ತು ಆಭರಣಗಳು ಅತ್ಯಂತ ಸುರಕ್ಷಿತವಾಗಿರುತ್ತದೆ ಎನ್ನುವುದು ಜನಸಾಮಾನ್ಯರ ನಂಬಿಕೆ ಹಾಗೂ ಬ್ಯಾಂಕ್ ಗಳು ನೀಡುವ ಖಾತರಿ. ಇದನ್ನು ನಂಬಿ ಲಾಕರ್ ನಲ್ಲಿ ನಗದು ಇಟ್ಟ ಗ್ರಾಹಕರೊಬ್ಬರು ಇದೀಗ ಪರಿತಪಿಸುವಂತಾಗಿದೆ.

ಮಂಗಳೂರಿನ ಕೆನರಾ ಬ್ಯಾಂಕ್ ಶಾಖೆಯೊಂದರ ಲಾಕರ್ನಲ್ಲಿಟ್ಟಿದ್ದ 8 ಲಕ್ಷ ರೂಪಾಯಿ ನೋಟುಗಳು ಗೆದ್ದಲು ಹಿಡಿದು ಪುಡಿಯಾಗಿವೆ.
ಈ ಸಂಬಂಧ ಗ್ರಾಹಕರೊಬ್ಬರು ಬೆಂಗಳೂರಿನಲ್ಲಿರುವ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಗೆ ಬಂದು ದೂರು ನೀಡಿದ್ದಾರೆ.ಆದರೆ ಬ್ಯಾಂಕ್ ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳುತ್ತಿದೆ.
ಮಂಗಳೂರಿನ ಕೋಟೆಕಾರ್ನ ಸಫಲ್ ಎಂಬ ಗ್ರಾಹಕರೊಬ್ಬರು ಹತ್ತಿರದ ಕೆನರಾ ಬ್ಯಾಂಕ್ ಶಾಖೆಯಲ್ಲಿ 8 ಲಕ್ಷ ರೂ. ಇಟ್ಟಿದ್ದರು. 6 ತಿಂಗಳ ಬಳಿಕ ಔಷಧಿಗಾಗಿ ದುಡ್ಡು ತೆಗೆಯಲು ಬ್ಯಾಂಕ್ಗೆ ಬಂದಿದ್ದಾರೆ ಅಧಿಕಾರಿಗಳು ಖುದ್ದಾಗಿ ಲಾಕರ್ ತೆರೆದಿದ್ದಾರೆ.
ಲಾಕರ್ ಒಳಗೆ ನೋಡಿದರೆ ಮಳೆ ನೀರಿನಲ್ಲಿ ನೆಂದ ಸ್ಥಿತಿಯಲ್ಲಿದ್ದ ದುಡ್ಡು ಸಂಪೂರ್ಣವಾಗಿ ಕಪ್ಪಾಗಿತ್ತು ಏನಿದು ಎಂದು ತೆಗೆದು ನೋಡಿದರೆ ಗೆದ್ದಲು ಹಿಡಿದು ನೋಟುಗಳು ಚೂರಾಗಿ ಬಿದ್ದಿದೆ. ಎಲ್ಲಾ ನೊಟುಗಳು ಇದೇ ರೀತಿ ಆಗಿದೆ.
ಆರ್ಬಿಐ ನಿಯಮದ ಪ್ರಕಾರ ಪ್ರಕಾರ ನಗದನ್ನು ಲಾಕರ್ನಲ್ಲಿ ಇಡುವಂತಿಲ್ಲ ಹೀಗಾಗಿ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಬ್ಯಾಂಕ್ನವರು ಹೇಳಿದ್ದಾರೆ. ಇದರಿಂದ ತೋಚದೆ ಸಫಲ್ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿ ಬ್ಯಾಂಕ್ ನ ಪ್ರಧಾನ ಕಚೇರಿಗೆ ದೂರು ನೀಡಿ, ಪರಿಹಾರಕ್ಕೆ ಮೊರೆ ಇಟ್ಟಿದ್ದಾರೆ
ಹಳೆಯ ಕಟ್ಟಡ ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿದೆ. ಹೀಗಾಗಿ ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ಲಾಕರ್ನಲ್ಲಿ ಹಣ ಇಡಬಾರದು ನಿಜ. ಆದರೆ ಬ್ಯಾಂಕ್ನಲ್ಲಿ ಹಣ ಇಟ್ಟರೆ ಸೇಫ್ ಎಂಬ ನಂಬಿಕೆಯಿಂದ ಹೀಗಾಗಿದೆ ಎಂದು ಸಫಲ್ ಬೇಸರ ವ್ಯಕ್ತಪಡಿಸಿದ್ದಾರೆ. ತಮಗಾದ ಅನ್ಯಾಯಕ್ಕೆ ಪರಿಹಾರ ಏನು ಎಂದು ಪ್ರಶ್ನಿಸುತ್ತಿದ್ದಾರೆ