Facebook Twitter Instagram
    Thursday, March 12
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ತಲೆಗೆ ಚೊಂಬು ಸಿಲುಕಿ ಒದ್ದಾಡುತ್ತಿದ್ದ ಕೋತಿಯ ರಕ್ಷಣೆ: ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ
    ಇತ್ತೀಚಿನ ಸುದ್ದಿ

    ತಲೆಗೆ ಚೊಂಬು ಸಿಲುಕಿ ಒದ್ದಾಡುತ್ತಿದ್ದ ಕೋತಿಯ ರಕ್ಷಣೆ: ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ

    March 12, 2026
    Share

    ಉಡುಪಿ: ಕಳೆದ ಎರಡು ಮೂರು ದಿನಗಳಿಂದ ಚೊಂಬು ತಲೆಗೆ ಸಿಲುಕಿಕೊಂಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೋತಿಯೊಂದನ್ನು ಸ್ಥಳೀಯರು ರಕ್ಷಿಸಿದ ಘಟನೆ ಪೆರ್ಣಂಕಿಲ ಗ್ರಾಮದ ಚಿತ್ರಬೈಲು ಎಂಬಲ್ಲಿ ಇಂದು ನಡೆದಿದೆ.

    ಪರಿಸರದಲ್ಲಿ ಚೊಂಬು ತಲೆಗೆ ಹಾಕಿಕೊಂಡು ಒದ್ದಾಡುತ್ತಿದ್ದ ಮಂಗವನ್ನು ಸ್ಥಳಿಯ ಸಮಾಜ ಸೇವಕರು ಮತ್ತು ಪರಿಸರ ಪ್ರೇಮಿ ನವೀನ್ ಕುಮಾರ್ ಚಿತ್ರಬೈಲ್, ಸುಕೇಶ್, ಹರೀಶ ರಾಮ ಮತ್ತು ವಿಶ್ವನಾಥ ಎಂಬವರು ಗಮನಿಸಿದರು.

    ಕೂಡಲೇ ಕಾರ್ಯಪ್ರವೃತ್ತರಾದ ಅವರು ಕೋತಿಯನ್ನು ಹಗ್ಗ ಕಟ್ಟಿ ಹಿಡಿದು, ಚಿತ್ರಬೈಲು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಪರಿಸರಕ್ಕೆ ಕೊಂಡೊಯ್ದಿದ್ದಾರೆ. ಕೋತಿಯ ತಲೆಯನ್ನು ನೀರಿನಲ್ಲಿ ಒದ್ದೆ ಮಾಡಿ ಬಳಿಕ ನಾಜೂಕಾಗಿ ಚೊಂಬನ್ನು ತಲೆಯಿಂದ ಬೇರ್ಪಡಿಸಿದ್ದಾರೆ.

    ಚೊಂಬು ತೆಗೆದ ತಕ್ಷಣ ಬದುಕಿದೆಯೋ ಬಡ ಜೀವ ಎಂಬಂತೆ ಕೋತಿ ಜಿಗಿದು ಓಡಿ ಪರಾರಿಯಾಗಿದೆ. ಸ್ಥಳೀಯ ಯುವಕರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    Post Views: 1

    Related Posts

    ವಿಟ್ಲ: ಬಾಡಿಗೆ ಮನೆಯಲ್ಲಿ ಡ್ರಗ್ಸ್‌ ದಂಧೆ, ನಾಲ್ವರು ಅರೆಸ್ಟ್ ..!!

    March 12, 2026

    ಮಂಗಳೂರು: ಪ್ಲಾಸ್ಟಿಕ್‌ ಚೀಲ, ಕವರ್‌ಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ನಿಷೇಧ..!!

    March 12, 2026

    ಮಂಗಳೂರು: ಬಾಲಕಿಯ ಅತ್ಯಾಚಾರ ಪ್ರಕರಣ- ಆರೋಪಿಗೆ 20 ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು ದಂಡ

    March 12, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.