ಮಂಗಳೂರು ನಗರದ ಕೊಟ್ಟಾರದ ಬಳಿ ಇರುವ ಇವನ್ನ ಹೋಮ್ಸ್ ಬಹು ಮಹಡಿ ಕಟ್ಟಡದಲ್ಲಿ 2018 ರಿಂದ 2021 ರವರೆಗೆ 2 ಬಿ ಎಚ್ ಕೆ ಮತ್ತು 3 ಬಿ ಎಚ್ ಕೆ ಕಟ್ಟಡ ಮಾಲೀಕರು ತಮ್ಮ ಪ್ಲಾಟಿನ ವಿಸ್ತೀರ್ಣಕ್ಕೆ ಅನುಸಾರವಾಗಿ ಮತ್ತು ಅವಿಭಜಿತ ಹಕ್ಕಿಗನುಗುಣವಾಗಿ ಮಾಸಿಕ ನಿರ್ವಹಣಾ ವೆಚ್ಚ ( Monthly Maintenance) ಪಾವತಿಸುತ್ತಿದ್ದರು, ಆದರೆ 2021 ರಲ್ಲಿ ಕಟ್ಟಡದ ಅಸೋಸಿಯೇಷನ್ ಕಾನೂನಿಗೆ ವಿರುದ್ಧವಾಗಿ ಎಲ್ಲಾ ಫ್ಲಾಟ್ ಮಾಲೀಕರು ಏಕರೂಪದ ಮಾಸಿಕ ನಿರ್ವಹಣಾ ವೆಚ್ಚ ಕೊಡಬೇಕಾಗಿ ನಿರ್ಣಯವನ್ನು ತೆಗೆದುಕೊಂಡಿದ್ದರು.
ಕೋರ್ಟು ಆದೇಶದ ಪ್ರತಿ ಇಲ್ಲಿದೆ👇
ಈ ನಿರ್ಣಯದ ವಿರುದ್ಧ ಕಟ್ಟಡದ ಮಾಲೀಕರಾದ ಚಂದ್ರಹಾಸ ಅಮೀನ್ ಇವರು ಕೋರ್ಟಿನಲ್ಲಿ ದಾವೆ ಹೊಡಿದ್ದರು. ವಾದ ಮತ್ತು ಪ್ರತಿವಾದಯು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಸಾಕ್ಷಿ ವಿಚಾರಣೆಯನ್ನು ಪರಿಗಣಿಸಿ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ 1972ನೇ ಅಪಾರ್ಟ್ಮೆಂಟ್ ಓನರ್ಶಿಪ್ ಆಕ್ಟ್ ಪ್ರಕಾರ ಮಾಲೀಕರು ತಮ್ಮ ಪ್ಲಾಟಿನ ವಿಸ್ತೀರ್ಣ ಅಥವಾ ಶೇಕಡಾವಾರು ಅವಿಭಜಿತ ಹಕ್ಕುಗಳುಸಾರವಾಗಿ ಮಾಸಿಕ ನಿರ್ವಹಣಾ ವೆಚ್ಚ ( Monthly Maintenance) ಪಾವತಿಸಲು ಬದ್ಧರೆ ಹೊರತು ಎಲ್ಲಾ ಫ್ಲಾಟ್ನ ಮಾಲೀಕರು ಏಕರೂಪದ ವಂತಿಗೆಯನ್ನು ನೀಡಬೇಕೆಂದು ಅಸೋಸಿಯೇಷನ್ ಮಾಡಿದ ನಿರ್ಣಯವನ್ನು ವಜಾ ಗೊಳಿಸಿ ದಿನಾಂಕ 21 ಆಗೊಷ್ಟು 2024ರಂದು ತೀರ್ಪು ನೀಡಿರುತ್ತದೆ.