ಉಡುಪಿ: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ಹಾಗೂ ಆಕೆಯ 7 ವರ್ಷದ ಮಗ ಏಪ್ರಿಲ್ 5 ರಿಂದ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದವರನ್ನು ಸ್ವಾತಿ (30) ಮತ್ತು ಆಕೆಯ 7 ವರ್ಷದ ಮಗ ಭವಿಷ್ ಎಸ್ ಎಂದು ಗುರುತಿಸಲಾಗಿದೆ.
ತಾನು ತೆಕ್ಕಟ್ಟೆ ಕೊಮೆಯಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗುತ್ತಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿ ಸ್ವಾತಿ ಮತ್ತು ಭವಿಷ್ ಮನೆಯಿಂದ ಹೊರಟಿದ್ದಾರೆ. ಆದರೆ ಅವರಿಬ್ಬರು ಅಜ್ಜಿಯ ಮನೆಗೂ ತೆರಳದೇ ಮನೆಗೂ ಹಿಂತಿರುಗದೇ ನಾಪತ್ತೆಯಾಗಿದ್ದಾರೆ.
ಸ್ವಾತಿ ಅವರು ಸುಮಾರು 5 ಅಡಿ ಎತ್ತರ, ಮಧ್ಯಮ ದೇಹ, ಕಪ್ಪು ಮೈಬಣ್ಣ ಮತ್ತು ಅಂಡಾಕಾರದ ಮುಖವನ್ನು ಹೊಂದಿದ್ದಾರೆ. ಅವರು ಕನ್ನಡ ಮಾತನಾಡುತ್ತಾರೆ. ಅವರ ಮಗ ಭವಿಷ್ ಸುಮಾರು 7 ವರ್ಷ ವಯಸ್ಸಿನವನಾಗಿದ್ದು, 2.5 ಅಡಿ ಎತ್ತರ, ಮಧ್ಯಮ ದೇಹ, ಕಪ್ಪು ಮೈಬಣ್ಣ ಮತ್ತು ದುಂಡಗಿನ ಮುಖವನ್ನು ಹೊಂದಿದ್ದಾನೆ. ಅವನು ಕೂಡ ಕನ್ನಡ ಮಾತನಾಡುತ್ತಾನೆ.
ಇವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಉಪ-ನಿರೀಕ್ಷಕರನ್ನು 9480805468, ಕುಂದಾಪುರ ವೃತ್ತ ನಿರೀಕ್ಷಕರನ್ನು 9480805433 ಅಥವಾ ಉಡುಪಿ ಪೊಲೀಸ್ ನಿಯಂತ್ರಣ ಕೊಠಡಿಯನ್ನು 0820-2526444 ಗೆ ಸಂಪರ್ಕಿಸುವಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಉಪ-ನಿರೀಕ್ಷಕರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.