ಮಂಗಳೂರು : ಮಂಗಳೂರಿನ ಜೆರೋಸಾ ಶಾಲಾ ಶಿಕ್ಷಕಿ ವಿರುದ್ಧ ಧರ್ಮ ಅವಹೇಳನದ ಆರೋಪ ವಿಚಾರದಲ್ಲಿ ಬಿಜೆಪಿ ಶಾಸಕರ ಮೇಲೆ ಎಫ್‌ಐಆರ್ ದಾಖಲಿಸಿದ ಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಗರಂ ಆಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ಕಾಂಗ್ರೆಸ್ ದ್ವಿಮುಖ ನೀತಿ ತುಷ್ಠಿಕರಣದ ನೀತಿ ಅನುಸರಿಸುತ್ತಿದೆ. ಶಾಲೆಯಲ್ಲಿ ಕೋಮು ಭಾವನೆ ಕೆರಳಿಸಿದ ಶಿಕ್ಷಕಿಯನ್ನು ಅಮಾನತುಗೊಳಿಸಿಲ್ಲ ಆದ್ರೆ ಸಾರ್ವಜನಿಕರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ ಶಾಸಕರ ಮೇಲೆ ಕೇಸು ದಾಖಲಿಸಿಲಾಗಿದೆ. ಕಾನೂನು ಕ್ರಮ ಕೈಗೊಂಡ ಶಿಕ್ಷಣಾಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಇದು ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ನ ಹೀನ ರಾಜಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಸುಂದರ್ ರಾಮ್ ಶೆಟ್ಟಿ ರಸ್ತೆ ಪ್ರಕರಣ ನಡೆದಿತ್ತು. ಅಲೋಶಿಯಸ್ ಶಾಲೆಯ ವಿದ್ಯಾರ್ಥಿಗಳನ್ನು ರಸ್ತೆಯಲ್ಲಿ ಕೂರಿಸಿ ಪ್ರತಿಭಟನೆ ಮಾಡಿದ್ರು ಆಗ ಆಗ ಶಾಸಕರ ಮೇಲೆ ಯಾವ ಕೇಸು ಹಾಕಲಿಲ್ಲ ಆದ್ರೆ ಈಗ ಶಾಸಕರಾದ ಭರತ್ ಶೆಟ್ಟಿ ಹಾಗು ವೇದವ್ಯಾಸ್ ಕಾಮತ್ ವಿರುದ್ಧದ ಕೇಸು ದಾಖಲಿಸಲಾಗಿದೆ. ಇದನ್ನು ನಾವು ಖಂಡಿಸುತ್ತೇವೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಇದಕ್ಕಾಗಿ ನಾವು ಕಾಂಗ್ರೆಸ್ ಸರಕಾರದ ಎದುರು ಭಿಕ್ಷೆ ಬೇಡೋದಿಲ್ಲ ಸಾರ್ವಜನಿಕವಾಗಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಗುಡುಗಿದ್ದಾರೆ. ಶಾಲೆಯಲ್ಲಿ ನಡೆದಿದ್ದು ಕಾಂಗ್ರೆಸ್ -ಬಿಜೆಪಿ ಅಥವಾ ಹಿಂದೂ -ಕ್ರೈಸ್ತರ ಹೋರಾಟ ಅಲ್ಲ , ತಮ್ಮ ಮಕ್ಕಳಿಗಾದ ಅನ್ಯಾಯದ ವಿರುದ್ಧ ಪೋಷಕರು ಪ್ರತಿಭಟಿಸಿದ್ದಾರೆ. ಆ ಹೋರಾಟಕ್ಕೆ ಬೆಂಗಾವಲಾಗಿ ಶಾಸಕರು ಬಂದಿದ್ದಾರೆ ಎಂದ ಕಟೀಲ್ ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ಮೂರು ಆಗ್ರಹಗಳಿವೆ. ಒಂದು ವರ್ಗಾವಣೆ ಮಾಡಿದ ಅಧಿಕಾರಿಯನ್ನ ವಾಪಸ್ ಕರೆಸಿಕೊಳ್ಳಿ ಎರಡು ಶಾಸಕರ ಕೇಸ್ ವಾಪಸ್ ತೆಗೆದುಕೊಳ್ಳಿ ಮತ್ತು ಧರ್ಮದ ಅವಹೇಳನ ಮಾಡಿದ ಶಿಕ್ಷಕಿ ಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶಾಲೆ ಬಳಿ ಪೋಷಕರು ಪಾಲಕರು ಹೋರಾಟವನ್ನ ಕೈಗೆತ್ತಿಕೊಂಡಿದ್ರು. ಹೋರಾಟ ಗಮನಕ್ಕೆ ಬಂದ ಮೇಲೆ ಸ್ಥಳಕ್ಕೆ ಹೋಗೋದು ಜನಪ್ರತಿನಿಧಿಗಳ ಜವಾಬ್ದಾರಿ ಆಗಿದ್ದು ನಾನು ಇದ್ದಿದ್ರೆ ನಾನೂ ಹೋರಾಟಕ್ಕೆ ಹೋಗುತ್ತಿದ್ದೆ ಆದ್ದರಿಂದ ಜನರ ಸಮಸ್ಯೆ ಆಲಿಸಲು ಪರಿಹರಿಸಲು ಶಾಸಕರು ಹೋಗಿದ್ದಾರೆ. ಪಾಲಕರ ಒತ್ತಾಯವನ್ನು ಸರಕಾರದ ಗಮನಕ್ಕೆ ತಂದಿದ್ದಾರೆ.ಆ ಕೆಲಸ ತಪ್ಪು ಎಂದು ವಿದ್ಯಾರ್ಥಿಗಳು ಸಾರ್ವಜನಿಕರು ಹೇಳಿದ್ದಾರೆ. ರಾಮನನ್ನ ಅವಹೇಳನ ಮಾಡಿದ್ದಕ್ಕೆ ವಿದ್ಯಾರ್ಥಿಗಳಿಗೆ ದುಃಖವಾಗಿದೆ ಹೊರತು ಇದನ್ನ ನಾವು ರಾಜಕೀಯಕ್ಕೆ ಬಳಸಿಕೊಂಡಿಲ್ಲ ಆದ್ರೆ ಇದರಲ್ಲಿ ರಾಜಕೀಯವನ್ನ ಮಾಡುವ ಕೆಲಸ ಕಾಂಗ್ರೆಸ್ ಮಾಡಿದ್ದು ಹಿಂದೂ ವಿರೋಧಿ ಸರ್ಕಾರ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದರು.