ವಿಟ್ಲ: ಒಂದೂವರೆ ತಿಂಗಳ ಮಗುವಿಗೆ ಅವಧಿ ಮುಗಿದ ಚುಚ್ಚು ಮದ್ದು ನೀಡಿದ ಬೇಜವ್ದಾರಿ ಘಟನೆ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.
ಕನ್ಯಾನ ದ ಜೀವನ್ ಪ್ರಕಾಶ್ ಡಿಸೋಜ ರವರ ಪತ್ನಿ ಹೆರಿಗೆಗೆಂದು ಪುತ್ತೂರು ಸಿಟಿ ಆಸ್ಪತ್ರೆಗೆ ತೆರಳಿದ್ದು,ಕಳೆದ ಸೆಪ್ಟಂಬರ್ 3ರಂದು ಡಾ. ಶೆಣೈ ರವರ ಚಿಕಿತ್ಸೆಯಲ್ಲಿ ಹೆರಿಗೆಯಾಗಿರುತ್ತದೆ.
ಡಾ.ಶೆಣೈರವರ ಸೂಚನೆಯಂತೆ ಒಂದೂವರೆ ತಿಂಗಳ ನಂತರ ಮಗುವಿನ ಆರೋಗ್ಯ ದೃಷ್ಟಿಯಿಂದ ಒಂದೂವರೆ ತಿಂಗಳ ಚುಚ್ಚುಮದ್ದು ನೀಡಲು ಬರುವಂತೆ ತಿಳಿಸಿದ್ದರು.
ಅದೇ ರೀತಿ ಅಕ್ಟೋಬರ್ 24ರಂದು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಡಾ. ಶೆಣೈರವರ ಅನುಮತಿಯಂತೆ ಒಂದೂವರೆ ತಿಂಗಳ ಮಗುವಿಗೆ ನೀಡ ಬೇಕಾದ (DPT 1 Polio Hepatitis B 1 Hib1) ಎಂಬ ಹೆಸರಿನ ಚುಚ್ಚು ಮದ್ದನ್ನು ನೀಡುವಂತೆ ತನ್ನ ಸಹಾಯಕಿ ಶುಶ್ರುಕಿಗೆ ಸೂಚಿಸಿದ್ದರು.ಅದರಂತೆ ಶಿಶುವಿಗೆ ಚುಚ್ಚು ಮದ್ದು ನೀಡಿದ್ದು,ಚುಚ್ಚು ಮದ್ದಿನ ಸ್ಟಿಕ್ಕರ್ ನ್ನು ನವಜಾತ ಶಿಶುವಿನ ಆರೋಗ್ಯ ದಾಖಲೆ ಪುಸ್ತಕದಲ್ಲಿ ಅಂಟಿಸಿದ್ದರು.
ಚುಚ್ಚು ಮದ್ದಿನ ಅವಧಿ 22/08/22 ಎಂದು ನಮೂದಿಸಲಾಗಿದ್ದು,ಅವಧಿ ಮುಗಿದು 2ತಿಂಗಳು ಕಳೆದ ಮದ್ದನ್ನು ನೀಡಲಾಗಿದೆ ಎಂದು ಮಗುವಿನ ಪೋಷಕರು ಪುತ್ತೂರು ಠಾಣೆಯಲ್ಲಿ ದೂರು ನೀಡಿದ್ದರು.
ಈ ಬಗ್ಗೆ ಆಸ್ಪತ್ರೆ ವೈಧ್ಯರನ್ನು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ