ಸುಳ್ಯ: ಕೆಮ್ರಾಜೆ ಗ್ರಾಮದ ಕೋಡಿಮಜಲು ಮನೆ ನೆಲ್ಲೂರು ಪ್ರಶಾಂತ್ ಎಸ್. ಆರ್ (26), ಸುಳ್ಯ ಎಂಬವರ ದೂರಿನಂತೆ ತಂದೆ ರಾಮಚಂದ್ರ ಗೌಡರವರು ಯಾವಾಗಲು ವಿಪರೀತ ಮದ್ಯಪಾನ ಮಾಡುವ ಚಟವುಳ್ಳವರಾಗಿದ್ದು, ಎಂದಿನಂತೆ ವಿಪರೀತ ಮದ್ಯಪಾನ ಮಾಡಿ ದಿನಾಂಕ 17-01-2025 ರಂದು ರಾತ್ರಿ ಮನೆಗೆ ಬಂದವರು ಪಿರ್ಯಾದಿರವರ ಅಜ್ಜ, ಅಜ್ಜಿ ಮತ್ತು ತಾಯಿಗೆ ಬೈಯುತ್ತಿದ್ದವರು ರಾತ್ರಿ ಸಮಯ ಸುಮಾರು 11-30 ಗಂಟೆಗೆ ನಿರ್ಮಾಣ ಹಂತದಲ್ಲಿರುವ ಮನೆಯ ಅಡುಗೆ ಕೋಣೆಯೊಳಗೆ ಇದ್ದ ಪಿರ್ಯಾದಿದಾರರ ತಾಯಿ ವನೋದ ಕುಮಾರಿ ರವರೊಂದಿಗೆ ಜಗಳ ಮಾಡಿ, ಕೈಯಲ್ಲಿದ್ದ ಕೋವಿಯಿಂದ ತಾಯಿಗೆ ಗುಂಡು ಹಾರಿಸಿ ಕೊಲೆ ಮಾಡಿ ಬಳಿಕ ರಬ್ಬರ್ ಆಸಿಡ್ ಕುಡಿದು ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪೊಲೀಸ್ ಠಾಣಾ ಅ.ಕ್ರ: 09/2025 ಕಲಂ: 103BNS2023 ಕಲಂ25.27 ಆರ್ಮ್ಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಶ್ರೀ ಅಮಿತ್ ಸಿಂಗ್ ಐ.ಪಿ.ಎಸ್ ರವರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಯತೀಶ್ ಎನ್, ಐ.ಪಿ.ಎಸ್ ರವರು ಭೇಟಿ ನೀಡಿ ಪರಿಶೀಲಿಸಿರುತ್ತಾರೆ.