ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿ ನೇತ್ರಾವತಿಯ ನೀರು ಕುಡಿಯಲು ಯೋಗ್ಯವಲ್ಲ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ನೀರಿನ ಗುಣಮಟ್ಟ ಯೋಜನೆ ಅಡಿಯಲ್ಲಿ ನದಿ ಮತ್ತು ಕೆರೆಗಳ ನೀರಿನ ಗುಣಮಟ್ಟದ ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದೆ.ಅದರಲ್ಲಿ ಧರ್ಮಸ್ಥಳದಲ್ಲಿ ಸಂಗ್ರಹಿಸಿದ ನೇತ್ರಾವತಿ ನದಿ ನೀರಿನ ಮಾದರಿಯನ್ನು ಪರೀಕ್ಷಿಸಿದಾಗ ನೀರು ಅಕ್ಟೋಬರ್ ತಿಂಗಳವರೆಗೆ ಸ್ನಾನಕ್ಕೆ ಯೋಗ್ಯವಾಗಿತ್ತು.ಆದರೆ ನವೆಂಬರ್ ತಿಂಗಳಲ್ಲಿ ಅದರ ಗುಣಮಟ್ಟ ಕುಸಿದು ಬಿ ವರ್ಗದಿಂದ ಸಿ ವರ್ಗಕ್ಕೆ ಇಳಿದಿದೆ. ಇದರನ್ವಯ ನೀರು ಸ್ನಾನಕ್ಕೂ ಯೋಗ್ಯವಿಲ್ಲ.
ನೇತ್ರಾವತಿ ನದಿ ಮಂಗಳೂರು ನಗರ ಮತ್ತು ನದಿ ದಂಡೆಯ ಪಟ್ಟಣ ಹಾಗು ಹಳ್ಳಿಗಳಿಗೆ ಕುಡಿಯುವ ನೀರಿನ ಮೂಲವಾಗಿದೆ.
ಕೆಲವೆಡೆ ಈ ನೀರನ್ನು ಶುದ್ದೀಕರಿಸಿ ಪೂರೈಕೆ ಮಾಡಲಾಗುತ್ತಿದ್ದರೆ ಆ ಸವಲತ್ತು ಇಲ್ಲದ ಊರುಗಳಿಗೆ ನೇರ ಸರಬರಾಜು ಆಗುತ್ತಿದೆ.