ಮಂಗಳೂರು: ಈಗಿನ ಜನತೆಗೆ ಹೊಸ ವರ್ಷ ಎಂದರೇ ಮೋಜು, ಮಸ್ತಿ, ಪಾರ್ಟಿ.! ಕ್ಯಾಲೆಂಡರ್ ವರ್ಷ ಅಂತ್ಯಗೊಳ್ಳುತ್ತಿದ್ದು ಯುವಕ ಯುವತಿರು ಮೋಜು ಮಸ್ತಿಗೆ ಈಗಾಗಲೇ ಸಕಲ ಸಿದ್ಧತೆಯನ್ನು ಮಾಡಿರುತ್ತಾರೆ.. ಆದರೆ ಇಂತಹ ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದಾಗಿ ವಿಶ್ವ ಹಿಂದೂ ಪರಿಷತ್ ಮಂಗಳೂರು ಆಗ್ರಹ ಮಾಡಿದೆ.
ಹೊಸ ವರುಷದ ಹೆಸರಿನಲ್ಲಿ ತಾರೀಕು 31 ಡಿಸೆಂಬರ್ ನಂದು ಹಲವು ಹೋಟೆಲ್, ಪಬ್ ಗಳು ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಪಾನ ಪಾರ್ಟಿಗಳನ್ನು ಆಯೋಜನೆ ಮಾಡಿದ್ದಾರೆ. ಹೊಸ ವರುಷದ ಹೆಸರಿನಲ್ಲಿ ನಡೆಯುವ ಕಾರ್ಯ ಕ್ರಮಗಳು ಪಾಶ್ಚಾತ್ಯ ಸಂಸ್ಕೃತಿಯಿಂದ ಕೂಡಿದೆ ಎಂದು ಜರಂಗದಳ ತೀವ್ರವಾಗಿ ವಿರೋಧಿಸಿದೆ. ಈಗಾಗಲೇ ಲವ್ ಜಿಹಾದ್ ಹೆಸರಿನಲ್ಲಿ ಮುಗ್ಧ ಹೆಣ್ಣುಮಕಳನ್ನು ಮೊಸಗೊಳಿಸಿ ಅವರನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಯುವಕರು ಇಂತಹ ಕೃತ್ಯಗಳಲ್ಲಿ ಸಕ್ರೀಯರಾಗಿದ್ದು, ಡ್ರಗ್ ಮಾಫಿಯಾ, ಸೆಕ್ಸ್ ಮಾಫಿಯಾದಂತಹ ಜಾಲಗಳು ಜಾಸ್ತಿ ಆಗುವ ಸಾಧ್ಯತೆಗಳಿವೆ, ಆದ್ದರಿಂದ ಯಾವುದೇ ಹೋಟೆಲ್ ಪಬ್ ಗಳಲ್ಲಿ ಹೊಸ ವರುಷದ ಪ್ರಯುಕ್ತ ನಡೆಯುವ ಪಾರ್ಟಿ, ಅಶ್ಲೀಲ ನೃತ್ಯಗಳಿಗೆ ಅನುಮತಿ ನೀಡಬಾರದು ಮತ್ತು ಎಲ್ಲಾ ಬಾರ್, ಪಬ್ ಮತ್ತು ಹೋಟೆಲ್ ಗಳನ್ನು ನಿಗದಿತ ಸಮಯದ ಒಳಗೆ ಮುಚ್ಚಿಸಲು ಕ್ರಮಕೈಗೊಳ್ಳಬೇಕೆಂದು ಮಂಗಳೂರು ಪೊಲೀಸ್ ಕಮಿಷ್ನರ್ಗೆ ಮನವಿ ಮಾಡಿದ್ದಾರೆ.