Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪುತ್ತೂರು: ಕೀಟ ನಾಶಕ ಸೇವಿಸಿದ ನವ ವಿವಾಹಿತೆ- ಚಿಕಿತ್ಸೆ ಫಲಿಸದೇ ಮೃತ್ಯು..!
    ಇತ್ತೀಚಿನ ಸುದ್ದಿ

    ಪುತ್ತೂರು: ಕೀಟ ನಾಶಕ ಸೇವಿಸಿದ ನವ ವಿವಾಹಿತೆ- ಚಿಕಿತ್ಸೆ ಫಲಿಸದೇ ಮೃತ್ಯು..!

    April 27, 2023
    Share

    ಪುತ್ತೂರು: ನವ ವಿವಾಹಿತೆಯೋರ್ವರು ಎರಡು ತಿಂಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈಕೆ ತವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಏ.25ರಂದು ನಡೆದಿದೆ. ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗುಡ್ಡಕೋಡಿ ಬಾಳಪ್ಪ ಪೂಜಾರಿಯವರ ಪುತ್ರಿ ಹರ್ಷಿತಾ(28ವ.) ಮೃತಪಟ್ಟವರು. ಹರ್ಷಿತಾ ಮತ್ತು ಬಲ್ನಾಡು ದಿ.ನಾರಾಯಣ ಪೂಜಾರಿಯವರ ಮಗ, ಕೆಮ್ಮಿಂಜೆ ದೇವಳದ ಮ್ಯಾನೇಜರ್ ಆಗಿರುವ ಪ್ರಶಾಂತ್ ಅವರ ವಿವಾಹವು ಇದೇ ಫೆ.10 ರಂದು ನಡೆದಿತ್ತು. ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ವಾಸ್ತವ್ಯವಿದ್ದ ಹರ್ಷಿತಾರವರು ಏ.23ರಂದು ತನ್ನ ತಾಯಿ ಮನೆಯ ನೆರೆಮನೆಯಲ್ಲಿ ನಡೆದ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಲೆಂದು ಪತಿ ಮನೆಯಿಂದ ತಾಯಿ ಮನೆಗೆ ಹೋಗಿದ್ದರು. ಅಲ್ಲಿ ಏ.24 ರಂದು ರಾತ್ರಿ ಬಚ್ಚಲು ಮನೆಗೆ ಹೋಗಿ ಬಂದ ಆಕೆ, ತಾನು ಕ್ರಿಮಿನಾಶಕ ವಿಷ ಪದಾರ್ಥವನ್ನು ಸೇವಿಸಿರುವುದಾಗಿ ತಾಯಿಯೊಂದಿಗೆ ಹೇಳಿ ಅಸ್ವಸ್ಥಗೊಂಡಿದ್ದರು. ಬಳಿಕ ತಾಯಿ, ಮಗ ಮತ್ತು ಸಂಬಂಧಿ ಅಣ್ಣ ಚೆನ್ನಪ್ಪ ಅಂಚನ್‌ರವರು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಹರ್ಷಿತಾ ಅವರು ಏ.25ರಂದು ಮೃತಪಟ್ಟಿದ್ದಾರೆ ಎಂದು ಎನ್ನಲಾಗಿದೆ. ಈ ಪ್ರಕರಣ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  

    Post Views: 411

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.