Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಕರಾವಳಿ ಸುದ್ದಿ»ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬೆಳಕು ಇಲ್ಲ, ಕುಳಿತುಕೊಳ್ಳಲು ಜಾಗ ಇಲ್ಲ – ಸಾರ್ವಜನಿಕರಿಂದ ಆಕ್ರೋಶ
    ಕರಾವಳಿ ಸುದ್ದಿ

    ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬೆಳಕು ಇಲ್ಲ, ಕುಳಿತುಕೊಳ್ಳಲು ಜಾಗ ಇಲ್ಲ – ಸಾರ್ವಜನಿಕರಿಂದ ಆಕ್ರೋಶ

    June 10, 2025
    Share

    ಸ್ಟೇಟ್‌ಬ್ಯಾಂಕ್‌: ಸ್ಟೇಟ್‌ಬ್ಯಾಂಕ್‌ನ ಬಸ್‌ ನಿಲ್ದಾಣದಲ್ಲಿ ಕೊರತೆಗಳ ಸಾಲಿಗೆ ಮತ್ತೂಂದು ಸೇರ್ಪಡೆಯಾಗಿದೆ.

    ಒಂದಿಲ್ಲೊಂದು ಕೊರತೆ ಎದುರಿಸುತ್ತಾ ಬಂದಿರುವ ಬಸ್‌ ನಿಲ್ದಾಣದಲ್ಲಿ ಈಗ ಬೆಳಕಿನ ಸಮಸ್ಯೆ ಉಂಟಾಗಿದೆ. ರಾತ್ರಿಯಾ ಗುತ್ತಿದ್ದಂತೆ ನಿಲ್ದಾಣದೊಳಗೆ ಕತ್ತಲು ಆವರಿಸುತ್ತದೆ. ನಿಲ್ದಾಣದಲ್ಲಿ ಮೇಲ್ಬಾವಣಿಯ ಕೊರತೆಯಿಂದಾಗಿ ಪ್ರಯಾಣಿಕರು ಮಳೆ, ಬಿಸಿಲಿಗೆ ತೊಂದರೆಗೀಡಾಗುತ್ತಿದ್ದರು. ಕೆಲವು ತಿಂಗಳುಗಳ ಹಿಂದೆ ಮೇಲ್ಬಾವಣಿ ಹಾಕಲಾಗಿತ್ತು. ಆದರೆ ಮೇಲ್ಬಾವಣಿ ಹಾಕಿದ ಬಳಿಕ ಬೆಳಕಿನ ಕೊರತೆ ಉಂಟಾಗಿದೆ.

    ನಿಲ್ದಾಣದಲ್ಲಿ 5 ಪ್ಲಾಟ್‌ಫಾರಂಗಳಿದ್ದು ಇವು ಗಳಿಗೆ ಮೇಲ್ಬಾವಣಿ ಹಾಕಲಾಗಿದೆ. ಆದರೆ ಆ ಮೇಲ್ಪಾ ವಣಿಯ ಕೆಳಗೆ ಬೆಳಕಿಲ್ಲದೆ ಸಮಸ್ಯೆಯಾಗಿದೆ. ಪಶ್ಚಿಮ ಭಾಗದ ಪ್ಲಾಟ್‌ಫಾರಂಗಳಲ್ಲಿ ಸಂಪೂರ್ಣ ಕತ್ತಲು ಆವರಿಸುತ್ತದೆ. ನಿಲ್ದಾಣದೊಳಗೆ ಹೈಮಾಸ್ಟ್ ದೀಪ ವೊಂದಿದೆ. ಆದರೆ ಮೇಲ್ಬಾವಣಿ ಅದರ ಬೆಳಕಿಗೆ ತಡೆಯೊಡ್ಡುತ್ತಿದೆ. ಪ್ಲಾಟ್‌ಫಾರಂನಲ್ಲಿ ರಾತ್ರಿ ವೇಳೆ ಬಸ್‌ಗಾಗಿ ಕಾದು ನಿಲ್ಲುವವರಿಗೆ, ಮುಖ್ಯವಾಗಿ ಮಹಿಳೆಯರಿಗೆ ಇದರಿಂದ ಸಮಸ್ಯೆಯಾಗಿದೆ.

    ಸುರಕ್ಷೆಗಾಗಿ ಬೆಳಕಿನ ವ್ಯವಸ್ಥೆ ಅಗತ್ಯ

    ಇಡೀ ಬಸ್‌ ನಿಲ್ದಾಣಕ್ಕೆ ಒಂದು ಹೈಮಾಸ್ಟ್ ದೀಪ ಮಾತ್ರವಿದೆ. ನಿಲ್ದಾಣದ ಕೆಲವು ಭಾಗಕ್ಕೆ ಇದರ ಬೆಳಕು ಸರಿಯಾಗಿ ಬೀಳುತ್ತಿಲ್ಲ. ಮುಖ್ಯವಾಗಿ ಛಾವಣಿಗಳ ಒಳಗೆ ಕತ್ತಲು ಆವರಿಸಿಕೊಳ್ಳುತ್ತಿದೆ. ಪ್ರಯಾಣಿಕರ ಸುರಕ್ಷೆಯ ದೃಷ್ಟಿಯಿಂದ ಇಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ.

    ಆಸನವಿಲ್ಲದೆ ಪರದಾಟ

    ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಒಂದೇ ಒಂದು ಆಸನದ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ನೂರಾರು ಮಂದಿ ಪ್ರಯಾಣಿಕರು ನಿಂತುಕೊಂಡೇ ಬಸ್‌ಗಾಗಿ ಕಾಯಬೇಕಾದ ಸ್ಥಿತಿ ಇದೆ. ಹಿರಿಯ ನಾಗರಿಕರು, ಮಹಿಳೆಯರು ಇದರಿಂದ ಹೆಚ್ಚು ತೊಂದರೆಗೀಡಾಗಿದ್ದಾರೆ.

    Post Views: 661

    BasicAmenities BusStandIssues CivicProblems CommuterStruggles MangaluruNews NoLighting NoSeating PublicInfrastructure PublicOutrage StateBankBusStand

    Related Posts

    ಮಂಗಳೂರು: ನಿವೃತ್ತ ಬ್ಯಾಂಕ್ ಮಹಿಳಾ ಉದ್ಯೋಗಿಗೆ ಸೈಬರ್ ವಂಚನೆ

    March 6, 2026

    ಮಂಗಳೂರು: ಕಾಲೇಜು ಯುವಕ-ಯುವತಿಯರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ- 6 ಮಂದಿ‌ ಅರೆಸ್ಟ್

    March 6, 2026

    ಧರ್ಮಸ್ಥಳ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿ ಬಂಧನ

    March 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.