ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೊರತುಪಡಿಸಿ ನೋಟಾಗೆ ಅತೀ ಹೆಚ್ಚು ಮತ ಚಲಾವಣೆಯಾಗಿದೆ. ಈ ಮೂಲಕ ಉಭಯ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತ ಗಳಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ನೋಟಾ ಮೂರನೇ ಸ್ಥಾನ ಪಡೆದುಕೊಂಡಿದೆ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ನೋಟಾಗೆ 23,576 ಮತಗಳು ಚಲಾವಣೆಯಾಗಿದೆ. ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ನೋಟಾಗೆ 11,269 ಮತಗಳು ಬಿದ್ದಿದೆ. ದಕ್ಷಿಣ ಕನ್ನಡ ಕ್ಷೇತ್ರದ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳು ನೋಟಾಕ್ಕೆ ಚಲಾವಣೆಯಾಗಿವೆ. ಬೆಳ್ತಂಗಡಿಯಲ್ಲಿ 7,691 ಮತ, ಮೂಡುಬಿದಿರೆ 2,166, ಮಂಗಳೂರು ನಗರ ಉತ್ತರ 2,019, ಮಂಗಳೂರು ನಗರ ದಕ್ಷಿಣ 1,551, ಮಂಗಳೂರು 892, ಬಂಟ್ವಾಳ 2,353, ಪುತ್ತೂರು 2302, ಸುಳ್ಯ 4,541 ಮತಗಳು ನೋಟಾಕ್ಕೆ ಬಿದ್ದಿದೆ. ಅಂಚೆ ಮತದಾನದಲ್ಲೂ 61 ಮತಗಳು ನೋಟಾಕ್ಕೆ ಬಂದಿದೆ.ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕುಂದಾಪುರ 1,578, ಉಡುಪಿ 1,778, ಕಾಪು 1,523, ಕಾರ್ಕಳ 2,780, ಶೃಂಗೇರಿ 943, ಮೂಡಿಗೆರೆ 1,135, ಚಿಕ್ಕಮಗಳೂರು 814, ತರಿಕೆರೆ 684 ನೋಟ ಮತ ಚಲಾವಣೆಯಾಗಿರುತ್ತದೆ.